ಗೋಕಾಕ:ಆನ್ ಲೈನ್ ಜೂಜಿಗೆ ಸರಕಾರ ಬ್ರೇಕ್ ಹಾಕಿದರು ಗೋಕಾಕದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರು
ಆನ್ ಲೈನ್ ಜೂಜಿಗೆ ಸರಕಾರ ಬ್ರೇಕ್ ಹಾಕಿದರು ಗೋಕಾಕದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 :
ಕೊರೋನಾ ವೈರಸ್ ಹರಡುವಿಕೆಯಿಂದ ಸ್ಥಗಿತ ಗೊಂಡಿದ್ದ ಐಪಿಎಲ್ ಪಂದ್ಯಗಳು ಮತ್ತೆ ಪುನರಾಂಭವಾಗಿದ್ದು, ಪಂದ್ಯಗಳು ದಿನದಿಂದ ದಿನಕ್ಕೆ ರಂಗೇರುತ್ತಿವೆ. ಈ ಮಧ್ಯೆ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿದೆ. ಬೆಟ್ಟಿಂಗ್ ದಂಧೆಯಲ್ಲಿ ಬಹುತೇಕ ಯುವ ಸಮುದಾಯವೇ ತೊಡಗಿರುವುದು ಆತಂಕ ಹೆಚ್ಚಿಸಿದೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕಿದೆ.
ಹೌದು ಹಿಂದೊಮ್ಮೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಗೋಕಾಕ ನಗರದ ಬುಕ್ಕಿಗಳು ಸದ್ದಿಲ್ಲದೆ ಆನ್ ಲೈನ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೆ. ಯಾರಿಗೂ ಸಂಶಯ ಬರಬಾರದು ಎಂದು ಪ್ಲ್ಯಾನ್ ಮಾಡಿಕೊಂಡು ದಂಧೆಗೆ ಇಳಿದಿರುವ ಇಲ್ಲಿನ ಬುಕ್ಕಿಗಳು ಸಂಕೇಶ್ವರ ( ಗಡ ಹಿಂಗ್ಲಜ್ ) ದಲ್ಲಿರುವ ಸದ್ದಾಂ ಎಂಬಾತನ ಸಹಾಯದಿಂದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸಿದ್ದಾರೆಂದು ಹೆಳಲಾಗುತ್ತಿದ್ದೆ. ಸರಕಾರದ ಮೊನ್ನೆ ನಡೆದ ಅಧಿವೇಶನದಲ್ಲಿ ಆನ್ ಲೈನ್ ಬೆಟ್ಟಿಂಗ್ ದಂಧೆಗೆ ಮೇಲೆ ಕಠಿಣ ಕಾನೂನು ರಚಿಸಿದರು ಸಹ ಇದು ನಮಗೆ ಸಂಬಂಧ ಪಟ್ಟಿದಲ್ಲ ಎಂದು ಅಂದುಕೊಂಡಿರುವ ಬುಕ್ಕಿಗಳು ಪೊಲೀಸ ಇಲಾಖೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಯಾವುದೇ ಪುರಾವೆಗಳು ತಮ್ಮ ಹತ್ತಿರ ಸಿಗದ ಹಾಗೆ ಬಹಳ ಚಾಣಾಕ್ಷತನದಿಂದ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಇವರ ಹೆಡೆಮುರಿ ಕಟ್ಟಲು ನಮ್ಮ ಪೊಲೀಸರು ಮುಂದಾಗಬೇಕಾಗಿದೆ.
ಬೆಟ್ಟಿಂಗ್ ಹೇಗೆ ? : ಆನ್‌ಲೈನ್‌ನಲ್ಲಿ ವ್ಯವಹಾರ ಇರುವುದರಿಂದ ಯಾವ ಪಂದ್ಯ? ಎಷ್ಟು ಗಂಟೆಗೆ ಆರಂಭಗೊಳ್ಳುತ್ತದೆ? ಎದುರಾಳಿ ಪಂದ್ಯದಲ್ಲಿ ಯಾರು ಉತ್ತಮ ಆಟಗಾರರು? ಅವರ ಪ್ರದರ್ಶನ ಹೇಗೆ? ಯಾವ ಟೀಂ ಟಾಸ್ ಗೆಲ್ಲುತ್ತದೆ? ಯಾವ ಬೌಲರ್ ಎಷ್ಟು ವಿಕೇಟ್ ಪಡೆಯುತ್ತಾನೆ? ಯಾವ ಬ್ಯಾಟ್ಸ್ ಮ್ಯಾನ್ ಎಷ್ಟು ರನ್ ಹೊಡೆಯುತ್ತಾನೆ? ಎಷ್ಟು ಓವರ್‌ಗಳಲ್ಲಿ ಪಂದ್ಯ ಮುಗಿಯಲಿದೆ? 10 ಓವರ್‌ಗಳಲ್ಲಿ ಬ್ಯಾಟಿಂಗ್ ಟೀಂ ಎಷ್ಟು ರನ್ ಗಳಿಸುತ್ತದೆ? 20 ಓವರ್‌ನಲ್ಲಿ ಎಷ್ಟು ರನ್ ಹೊಡೆಯುತ್ತದೆ? ಯಾವುದು ಫೆವ್ ರೆಟ್ ಟೀಂ? ಯಾವುದು ಅನ್ ಫೆವ್‌ರೆಟ್ ಟೀಂ ಎಂದು ತರಾವರಿ ಪ್ರಶ್ನೆ ಹಾಕಿ ಬೆಟ್ಟಿಂಗ್ ಗೆ ಹಣ ಹೂಡುವ ಖಯಾಲಿ ದಟ್ಟವಾಗಿ ಗೋಚರಿಸಿದೆ.
ಬೆಟ್ಟಿಂಗ್‌ನಲ್ಲಿ ಹೂಡಿದ ಹಣವನ್ನು ಆನ್‌ಲೈನ್‌ನಲ್ಲೇ ಬುಕ್ಕಿಗಳಿಗೆ ಅಥವಾ ಬೆಟ್ಟಿಂಗ್ ಆಡಿಸಿದವರ ಖಾತೆಗೆ ಹಣ ರವಾನೆಯಾಗುತ್ತಿದೆ. ಪಂದ್ಯ ಆರಂಭವಾದ ವೇಳೆ ಕಣದಲ್ಲಿರುವ ಎರಡು ಟೀಂ ಸ್ಟ್ರಾಂಗ್ ಇದ್ದರೆ ಬೆಟ್ಟಿಂಗ್‌ನಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮಾಡಲಾಗಲ್ಲ. ಒಂದು ವೇಳೆ ಕಣದಲ್ಲಿರುವ ಎರಡು ಟೀಂಗಳಲ್ಲಿ ಒಂದು ಟೀಂ ಡಲ್ ಇದ್ದರೆ ಅಂತಹ ಟೀಂಗಳ ಪರ ಹಣ ಹಾಕುವವರಿಗೆ ಬೆಟ್ಟಿಂಗ್ ಮಾಡಿದ ಹಣಕ್ಕಿಂತ ದುಪ್ಪಟ್ಟು ನೀಡಲಾಗುವುದೆಂದು ಯುವಕರಿಗೆ ಆಮಿಷವೊಡ್ಡಲಾಗುತ್ತಿದೆ.
ಬೆಟ್ಟಿಂಗ್ ಆಡುವವರಿಗೆ ಸಾವಿರ ರೂ.ಗೆ 10 ರೂ. ವರೆಗೆ ಹಣ ನೀಡಲಾಗುವುದು ಎಂದು ಬುಕ್ಕಿಗಳು ಆಮಿಷ ಒಡ್ಡುತ್ತಿದ್ದಾರೆನ್ನುವ ಆರೋಪಗಳು ಕೇಳಿ ಬಂದಿವೆ. ಬುಕ್ಕಿಗಳು ಸೇರಿ ಬೆಟ್ಟಿಂಗ್ ಆಡುವವರಿಗೆ ಟಿಪ್ಸ್ ನೀಡುವ ಸಲುವಾಗಿಯೇ ಕೆಲ ಅಧಿಕೃತ ವೆಬ್‌ಸೈಟ್‌ಗಳು ಹುಟ್ಟಿಕೊಂಡಿವೆ. ಇನ್ನು ಕೆಲ ವೆಬ್‌ಸೈಟ್‌ಗಳು ಮಾನ್ಯತೆ ಪಡೆಯದೇ ಟಿಪ್ಸ್ ನೀಡುವ ಮೂಲಕ ತೆರಿಗೆ ವಂಚಿಸುತ್ತಿವೆ. ಬೆಟ್ಟಿಂಗ್ ಆಡುವವರು ಮೊದಲೇ 30 ಸಾವಿರ ರೂ.ಗಳನ್ನು ಬುಕ್ಕಿಗಳಲ್ಲಿ ಡಿಪಾಜಿಟ್ ಮಾಡಿದಾಗ ಮಾತ್ರ ಆಡಲು ಸಾಧ್ಯ. ಬೆಟ್ಟಿಂಗ್ ಆಡಿದವರು ಬುಕ್ಕಿಗಳಿಗೆ ನೇರವಾಗಿ ನಗದು ರೂಪದಲ್ಲಿ ಹಣ ನೀಡದೇ ಆನ್‌ಲೈನ್ ಮೂಲಕ ಪೇ-ಟಿಎಂ, ಗೂಗಲ್-ಪೇ, ಫೋನ್ ಪೇ ಮೂಲಕ ವ್ಯವಹಾರ ನಡೆಸುತ್ತಾರೆಂದು ಹೇಳಲಾಗಿದೆ.
ಕೆಲವರು ಬೆಟ್ಟಿಂಗ್‌ನಲ್ಲಿ ಸೋತು ಹೊಲ, ಮನೆ ಮಾರುವಂತಹ ಸ್ಥಿತಿಗೂ ಬಂದಿದ್ದಾರೆ. ಇನ್ನೂ ಕೆಲವರು ಲಕ್ಷಾಂತರ ರೂ. ಸಾಲ ಮಾಡಿ ಹಣ ಮರುಪಾವತಿಸಲಾಗದೇ ಊರು ಬಿಟ್ಟು ಹೋಗಿ ಎಂಟತ್ತು ವರ್ಷಗಳಾದರೂ ಮರಳಿ ಬಂದಿಲ್ಲ.
ಹೀಗೆ ಒಂದಿಲ್ಲೊಂದು ಪ್ರಕರಣಗಳಿಂದ ಸುದ್ದಿಯಲ್ಲಿರುವ ಗೋಕಾಕ ನಗರ ಮತ್ತೆ ಆನ್ ಲೈನ ಬೆಟ್ಟಿಂಗ್ ದಂಧೆಯಲ್ಲಿ ಸದ್ದು ಮಾಡುತ್ತಿದ್ದೆ. ಇದಿಷ್ಟು ನಮ ಹತ್ತಿರ ಇದ್ದ ಮಾಹಿತಿ. ಇದಕ್ಕೆ ಸಂಬಂಧಿಸಿದಂತೆ ಮುಂದುವರೆದು ಮತ್ಯಾವ ಮಾಹಿತಿ ನಮಗೆ ದೊರೆತರೆ ತಪ್ಪದೇ ತಮ್ಮೊಂದಿಗೆ ಹಂಚಿಕೊಳ್ಳಲುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅದನ್ನೇ ಇರಲಿ ಇಂತಹ ದಂಧೆಯಲ್ಲಿ ತೊಡಗಿರುವವರನ್ನು ಹುಡುಕಿ ಇದನ್ನು ಮಟ್ಟಹಾಕಲು ಪೊಲೀಸ ಇಲಾಖೆ ಮುಂದಾಗಬೇಕಾಗಿದೆ.