RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಶೀರ್ವಧಿಸಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೋಟಿ. ಕೋಟಿ ನಮನಗಳು : ಶಾಸಕ ರಮೇಶ

ಗೋಕಾಕ:ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಶೀರ್ವಧಿಸಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೋಟಿ. ಕೋಟಿ ನಮನಗಳು : ಶಾಸಕ ರಮೇಶ 

ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಶೀರ್ವಧಿಸಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೋಟಿ. ಕೋಟಿ ನಮನಗಳು : ಶಾಸಕ ರಮೇಶ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 3 :

 

 

ಮಹತ್ವದ ಉಪಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಶೀರ್ವಧಿಸಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೋಟಿ. ಕೋಟಿ ನಮನಗಳೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ಗೋಕಾಕ ಮತಕ್ಷೇತ್ರದ ಕೊಣ್ಣೂರು ಪಟ್ಟಣದಲ್ಲಿ ಹಮ್ಮಿಕೊಂಡ ಮತದಾರರ ಅಭಿನಂಧನಾ ಸಮಾರಂಭದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ರಾಷ್ಟ್ರಮಟ್ಟದ ಗಮನ ಸೆಳೆದ ಈ ಉಪಚುನಾವಣೆಯಲ್ಲಿ ನನಗೆ ಆಶೀರ್ವಧಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತ್ರತ್ವದ ರಾಜ್ಯ ಸರಕಾರವನ್ನು ಭದ್ರಗೊಳಿಸಿದ್ದಿರಿ, ಕಳೆದ ನಾಲ್ಕೈದು ತಿಂಗಳುಗಳಿಂದ ಕಾನೂನು ಹೋರಾಟದಲ್ಲಿ ತೋಡಗಿದ್ದ ಸಂದರ್ಭದಲ್ಲಿ ವಿರೋಧಿಗಳು ಸಾಕಷ್ಟು ಕುತಂತ್ರ. ಅಪಪ್ರಚಾರ ಮಾಡಿದರೂ ಬುದ್ಧಿವಂತ ಮತದಾರರು ನನ್ನನ್ನು ಕೈಬಿಡಲಿಲ್ಲ. ನೀವು ನನ್ನ ಹಾಗೂ ಬಿಜೆಪಿ ಪಕ್ಷದ ಮೇಲೆ ಇಟ್ಟ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ನಿಮ್ಮ ಆಶೋತ್ತರಗಳಿಗೆ ಸ್ಫಂಧಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೆನೆಂದು ಶಾಸಕರು ಹೇಳಿದರು.
ಈ ಚುನಾವಣೆಯಲ್ಲಿ ಬಹಳಷ್ಟು ಸಿಹಿ ಕಹಿ ಘಟನೆಗಳಾಗಿವೆ. ವ್ಯವಸ್ಥಿತ ಪಿತೂರಿ, ಕುತಂತ್ರ ಹಾಗೂ ಮತದಾರರ ಗೊಂದಲದಿಂದ ಅಂತರ ಸ್ವಲ್ಪ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಗಾಳಿ ಮಾತಿಗೆ ಕಿವಿಗೊಡಬೇಡಿ. ಮತಗಳ ವಿಭಜನೆಗೆ ಅವಕಾಶ ಕೊಡದೆ ನನಗೆ ಆಶೀರ್ವಧಿಸಿ. ಹಣಕ್ಕಿಂತ ಜನರ ಪ್ರೀತಿ ಮುಖ್ಯ. ದೇವರ ಹಾಗೂ ತಂದೆ ತಾಯಿಗಳ ಆಶೀರ್ವಾಧದಿಂದ ನಿಮ್ಮಲ್ಲೆಲ್ಲರ ಗಳಿಸಿದ್ದೆನೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೆಂಬಲವಿದ್ದು, ಅದರಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಟಿ ಆರ್ ಕಾಗಲ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ವಿರುಪಾಕ್ಷ ಯಲಿಗಾರ, ಮುಖಂಡರುಗಳಾದ ವಿನೋದ ಕರನಿಂಗ, ಪ್ರಕಾಶ ಕರನಿಂಗ, ಎಚ್ ಡಿ ಮುಲ್ಲಾ, ಎ ಜೆ ಪಾಟೀಲ, ನಂದಾ ಗಣಾಚಾರಿ, ಭುಜಪ್ಪ ಖನಗಾಂವಿ, ವಿಠ್ಠಲ ಸಿಂಪಿಹಟ್ಟಿ, ಪ್ರೇಮಾ ಭಂಡಾರಿ, ರಾಮಲಿಂಗ ಮಗದುಮ ಸೇರಿದಂತೆ ಅನೇಕರು ಇದ್ದರು.

Related posts: