RNI NO. KARKAN/2006/27779|Wednesday, May 6, 2026
You are here: Home » breaking news » ಗೋಕಾಕ:ವಿದ್ಯಾರ್ಥಿನಿ ಮುಸ್ತಕೀಮಗೆ ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದ ಸನ್ಮಾನ

ಗೋಕಾಕ:ವಿದ್ಯಾರ್ಥಿನಿ ಮುಸ್ತಕೀಮಗೆ ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದ ಸನ್ಮಾನ 

ವಿದ್ಯಾರ್ಥಿನಿ ಮುಸ್ತಕೀಮಗೆ  ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದ ಸನ್ಮಾನ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 11 :

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ,  ಗೌಸಿಯಾ ಕಾಲೇಜ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಬಿ.ಇ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್  ಪದವಿಯಲ್ಲಿ  ಡಿಸ್ಟಿಂಷನ್ ನಲ್ಲಿ ಉರ್ತೀಣಳಾದ ನಗರದ  ವಿದ್ಯಾರ್ಥಿನಿ ಕುಮಾರಿ ಮುಸ್ತಕೀಮ ಖಾಜಿ ಇವಳಿಗೆ ಇಲ್ಲಿನ ಅಂಜುಮನ್ ಏ ಇಸ್ಲಾಂ ಕಮಿಟಿ ಮತ್ತು ಮಹಾತ್ಮಾ ಗಾಂಧೀ ಎಜುಕೇಶನ್ ಟ್ರಸ್ಟ್ ವತಿಯಿಂದ ಶನಿವಾರದಂದು  ಸತ್ಕರಿಸಿ , ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ್ ಗೋಕಾಕ ವಿದ್ಯಾರ್ಥಿಗಳು ಕೇವಲ ಅಂಕವನ್ನು ಗಳಿಸುವುದಕ್ಕಾಗಿ ವಿದ್ಯಾಭ್ಯಾಸವನ್ನು ಮಾಡದೆ ಉತ್ತಮವಾದ ಜ್ಞಾನವನ್ನು ಸಂಪಾದಿಸುವುದಕ್ಕಾಗಿ ವಿದ್ಯಾಭ್ಯಾಸ ಮಾಡಿ,  ಇತರರಿಗೆ ಮಾದರಿ ಆಗಬೇಕು. ಮುಂದಿನ ದಿನಗಳಲ್ಲಿ ಇಂತಹ  ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರಿತಿಸಿ ಅವರಿಗೆ ಗೌರವಿಸಿ ,ಪ್ರೋತ್ಸಾಹಿಸುವ ಕಾರ್ಯ ನಮ್ಮ ಸಂಸ್ಥೆಯಿಂದ ನಿರಂತರವಾಗಿ  ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧಾಯರಾದ  ಶ್ರೀಮತಿ ಜೆ.ಕೆ ಖಾಜಿ, ಎಂ.ಕೆ ಖಾಜಿ, ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts: