RNI NO. KARKAN/2006/27779|Monday, July 14, 2025
You are here: Home » breaking news » ಗೋಕಾಕ:ರಮೇಶ ಜಾರಕಿಹೊಳಿ ಶೀಘ್ರ ಆರೋಪಮುಕ್ತ ರಾಗಲಿದ್ದಾರೆ : ಮುರುಘರಾಜೇಂದ್ರ ಶ್ರೀ ಭವಿಷ್ಯ

ಗೋಕಾಕ:ರಮೇಶ ಜಾರಕಿಹೊಳಿ ಶೀಘ್ರ ಆರೋಪಮುಕ್ತ ರಾಗಲಿದ್ದಾರೆ : ಮುರುಘರಾಜೇಂದ್ರ ಶ್ರೀ ಭವಿಷ್ಯ 

ರಮೇಶ ಜಾರಕಿಹೊಳಿ ಶೀಘ್ರ ಆರೋಪಮುಕ್ತ ರಾಗಲಿದ್ದಾರೆ : ಮುರುಘರಾಜೇಂದ್ರ ಶ್ರೀ ಭವಿಷ್ಯ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 24 :

 
ರಮೇಶ ಜಾರಕಿಹೊಳಿ ಅವರಿಗೆ ಮರಳಿ ಸಚಿವ ಸ್ಥಾನ ನೀಡುವಂತೆ ನಗರದ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗುರುವಾರದಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರಿಗೆ ಬಹಳ ಅನ್ಯಾಯವಾಗಿದ್ದು, ಅವರು ಆರೋಪಮುಕ್ತ ರಾಗಲಿದ್ದಾರೆ. ಅವರಿಗಾದ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿಗಳು ಮತ್ತೆ ಸಚಿವ ಸ್ಥಾನ ನೀಡಬೇಕು ಎಂದರು.
ರಮೇಶ ಅವರ ಅನೇಕ ಅಭಿವೃದ್ಧಿ ಕಾರ್ಯಗಳು ಹಾಗೂ ಅವರ ಅಭಿವೃದ್ಧಿಯ ವೇಗವನ್ನು ಕೆಲವರಿಗೆ ಸಹಿಸಲಾಗಿಲ್ಲ ಎಂದು ನನಗನಿಸುತ್ತದೆ ಎಂದು ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ರಮೇಶ ಜಾರಕಿಹೊಳಿ ಅವರ ಪಾತ್ರ ಮಹತ್ವದ್ದಾಗಿದೆ. ಇದನ್ನು ರಾಜ್ಯದ ಜನರು ಹಾಗೂ ಬಿಜೆಪಿ ಪಕ್ಷದ ಎಲ್ಲರೂ ಒಪ್ಪುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಆದಷ್ಟು ಬೇಗ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ರಮೇಶ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ಡ್ಯಾಂ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ತಂದಿದ್ದರು. ರಮೇಶ ಜಾರಕಿಹೊಳಿ ಸಚಿವರಾಗಿ ಮುಂದುವರೆದಿದ್ದಲ್ಲಿ ಡ್ಯಾಂ ಕಾಮಗಾರಿ ಪ್ರಾರಂಭವಾಗುತಿತ್ತು. ರಮೇಶ ಜಾರಕಿಹೊಳಿ ಅವರನ್ನು ಮರಳಿ ಸಚಿವರನ್ನಾಗಿ ಮಾಡಿ ನಮ್ಮ ಭಾಗದ ಅಭಿವೃದ್ಧಿಗೆ ಸಿಎಮ್ ಬಿ ಎಸ್ ಯಡಿಯೂರಪ್ಪನವರು ಸಹಕರಿಸಬೇಕು ಎಂದರು.

Related posts: