RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳ ಸಾಧನೆಯಲ್ಲಿ ಪಾಲಕರ ಹಾಗೂ ಶಿಕ್ಷಕರ ಮತ್ತು ಸಂಸ್ಥೆಯ ಪಾತ್ರ ಮಹತ್ವದಾಗಿದೆ : ಜಯಾನಂದ ಮುನವಳ್ಳಿ

ಗೋಕಾಕ:ವಿದ್ಯಾರ್ಥಿಗಳ ಸಾಧನೆಯಲ್ಲಿ ಪಾಲಕರ ಹಾಗೂ ಶಿಕ್ಷಕರ ಮತ್ತು ಸಂಸ್ಥೆಯ ಪಾತ್ರ ಮಹತ್ವದಾಗಿದೆ : ಜಯಾನಂದ ಮುನವಳ್ಳಿ 

ವಿದ್ಯಾರ್ಥಿಗಳ ಸಾಧನೆಯಲ್ಲಿ ಪಾಲಕರ ಹಾಗೂ ಶಿಕ್ಷಕರ ಮತ್ತು ಸಂಸ್ಥೆಯ ಪಾತ್ರ ಮಹತ್ವದಾಗಿದೆ : ಜಯಾನಂದ ಮುನವಳ್ಳಿ

ಗೋಕಾಕ ಜು 13 : ವಿದ್ಯಾರ್ಥಿಗಳ ಸಾಧನೆಯಲ್ಲಿ ಪಾಲಕರ ಹಾಗೂ ಶಿಕ್ಷಕರ ಮತ್ತು ಸಂಸ್ಥೆಯ ಪಾತ್ರ ಮಹತ್ವದಾಗಿದೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ರವಿವಾರದಂದು ನಗರದ ಕೆಎಲ್ಇ ಸಂಸ್ಥೆಯ ಮಹಾದೇವಪ್ಪಣ್ಣ ಮುನವಳ್ಳಿ ಶಾಲಾ ಆವರಣದಲ್ಲಿ ಇಲ್ಲಿನ ಕೆಎಲ್ಇ ಸಿ.ಎಸ್.ಅಂಗಡಿ ಪಿ.ಯು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಿ.ಯು.ಸಿ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಗುರುಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ಅದನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಜೀವನದಲ್ಲಿ ಸಾಧನೆ ಮಾಡಬೇಕು ಉನ್ನತ ಗುರಿಯೊಂದಿಗೆ ಪ್ರಯತ್ನ ಶೀಲರಾಗಿ ಉನ್ನತ ಹುದ್ದೆ ಅಲಂಕರಿಸಬೇಕು. ಕೆಎಲ್ಇ ಸಂಸ್ಥೆ ತಾಲೂಕಿನ 25 ವಿದ್ಯಾರ್ಥಿಗಳನ್ನು ಐಎಎಸ್ ಹಾಗೂ ಐಪಿಎಸ್ ಮಾಡುವ ಗುರಿಯೊಂದಿಗೆ ಕಾರ್ಯಪ್ರವೃತವಾಗಿದೆ. ವೃತ್ತಿಪರ ಕಾಲೇಜುಗಳನ್ನು ಪ್ರಾರಂಭಿಸಿ ಪ್ರತಿ ವರ್ಷ 200 ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪರಸ್ಥಳಕ್ಕೆ ಹೋಗದೆ ಇಲ್ಲಿಯೇ ಗುಣಮಟ್ಟದ ಶಿಕ್ಷಣ ಪಡೆಯುವಂತ ವ್ಯವಸ್ಥೆಯನ್ನು ಕೆಎಲ್ಇ ಸಂಸ್ಥೆ ಕಲ್ಪಿಸುತ್ತಿದ್ದು, ತಾವೆಲ್ಲರೂ ಸಹಕಾರ ನೀಡುವಂತೆ ಕೋರಿದರು.
ಮುಖ್ಯ ಆಥಿಗಳಾಗಿ ಆಗಮಿಸಿದ್ದ ಇಂಡಿಯನ್ ರೆವ್ಹಿನ್ಯೂ ಸರ್ವಿಸ್ ಗೆ ಆಯ್ಕೆಯಾದ ನಗರದ ಎಸ್.ಎಸ್.ಕೌಜಲಗಿ ಅವರು ಮಾತನಾಡಿ ಜ್ಞಾನಿಗಳನ್ನು ಜಗತ್ತೆಲ್ಲ ಗೌರವಿಸುತ್ತದೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳಿರಿ ಏಕಾಗ್ರತೆ ಕಠಿಣ ಪರಿಶ್ರಮದೊಂದಿಗೆ ಪ್ರಯತ್ನ. ಶೀಲರಾದರೆ ಯಶಸ್ಸು ನಿಶ್ಚಿತ ಓದುವ ಹವ್ಯಾಸ ಬೆಳೆಸಿಕೊಂಡು ಆಧುನಿಕ ತಂತ್ರಜ್ಞಾನದ ಸದುಪಯೋಗದಿಂದ ಸಾಮಾನ್ಯ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಳ್ಳಿರಿ.ಆತ್ಮ ವಿಶ್ವಾಸದಿಂದ ತಮ್ಮ ಕನಸ್ಸನ್ನು ನನಸಾಗಿಸಿಕೊಂಡು ಸಾಧಕರಾಗಿರೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಪಿ.ಯು.ಸಿ.ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ರ್ಯಾಂಕ್ ಪಡೆದ ಹಾಗೂ ಡಿಸ್ಟಿಕಷನ್ ನಲ್ಲಿ ಪಾಸಾದ ವಿದ್ಯಾರ್ಥಿಗಳು ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕೆಎಲ್ಇ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಡಿ.ಚುನಮರಿ, ಸದಸ್ಯರಾದ ಓಂಪ್ರಕಾಶ್ ಅಂಗಡಿ, ಪ್ರೋ‌ಚಂದ್ರಶೇಖರ ಅಕ್ಕಿ, ಆಡಳಿತಾಧಿಕಾರಿ ಜಿ.ಎಂ.ಅಂದಾನಿ, ಪ್ರಾಚಾರ್ಯರಾದ ಎಂ.ಎನ್.ಕೌಜಲಗಿ, ಎಂ.ಎ ಪಾಟೀಲ್, ಅಮೃತ ಜಕಲಿ ಇದ್ದರು.

Related posts: