RNI NO. KARKAN/2006/27779|Wednesday, June 24, 2026
You are here: Home » breaking news » ಗೋಕಾಕ:ಘಟಪ್ರಭಾ ನದಿಯಲ್ಲಿ ಮುಳುಗಿ ಯುವನೋರ್ವ ಕಣ್ಣರೆ

ಗೋಕಾಕ:ಘಟಪ್ರಭಾ ನದಿಯಲ್ಲಿ ಮುಳುಗಿ ಯುವನೋರ್ವ ಕಣ್ಣರೆ 

ಘಟಪ್ರಭಾ ನದಿಯಲ್ಲಿ ಮುಳುಗಿ ಯುವನೋರ್ವ ಕಣ್ಣರೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 24 :

 

ನಗರದ ಶಿಂಗಳಾಪುರ ಬ್ರಿಡ್ಜ್ ನಲ್ಲಿ ಮುಳುಗಿ ಯುವಕನೋರ್ವ ನೀರು ಪಾಲಾದ ಘಟನೆ ಸೋಮವಾರ ಸಂಭವಿಸಿದೆ.

ಗೋಕಾಕ ನಗರದ ಹಣ್ಣಿನ ವ್ಯಾಪಾರಸ್ಥ ಇಮಾಮಸಾಬ ನರೋ ಎಂಬುವವರ ಮಗ ತೌಫಿಕ್ ಇಮಾಮಸಾಬ ನರೊ( 20) ಕಣ್ಮರೆಯಾಗಿದ್ದು‌, ಯುವಕ ತೌಫಿಕ್ ಗಾಗಿ ಶೋಧಕಾರ್ಯ ನಡೆಯುತ್ತಿದೆ. ಇನ್ನೂವರೆಗೆ ಯುವಕ ಪತ್ತೆ ಆಗಿಲ್ಲ. ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿದ್ದಾರೆ.

ಹಿಡಕಲ್ ಜಲಾಶಯದಿಂದ 4043 ಸಾವಿರ ಕ್ಯೂಸೆಕ್ ನೀರು ಹರಿ ಬಿಟ್ಟಿದ್ದರಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಶಿಂಗಳಾಪುರ ಸೇತುವೆ ಭರ್ತಿ ಆಗಿದೆ. ಈಜಲು ಹೋಗಿದ್ದ ಯುವಕ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

Related posts: