RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉದ್ಘಾಟನೆ

ಗೋಕಾಕ:ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉದ್ಘಾಟನೆ 

ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆ ಸಚಿವ ರಮೇಶ ಜಾರಕಿಹೊಳಿ ಅವರಿಂದ ಉದ್ಘಾಟನೆ
ಗೋಕಾಕ ಸೆ 13: ನಗರದ ಬ್ಯಾಳಿಕಾಟ ಹತ್ತಿರ ನೂತನವಾಗಿ ಪ್ರಾರಂಭವಾಗಿರುವ ಇಖ್ರಾ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಆಸ್ಪತ್ರೆಯನ್ನು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು

ನಂತರ ಮಾತನಾಡಿದ ಸಚಿವರು ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದದ್ದು ಅತಂಹ ವೃತ್ತಿಯನ್ನು ಸಮಾಜಸೇವೆ ಎಂದು ಭಾವಿಸಿ ಮಾಡಿ ಜನರ ಪ್ರೀತಿಗೆ ಪಾತ್ರರಾಗಬೇಕೆಂದು ಶುಭ ಹಾರೈಸಿದರು

ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ , ಮಡೆಪ್ಪಾ ತೋಳಿನವರ , ನಗರಸಭೆ ಅಧ್ಯಕ್ಷ ತಳದಪ್ಪಾ ಅಮ್ಮಣಗಿ , ನಗರಸಭೆ ಸದಸ್ಯ ಎಸ.ಎ.ಕೋತವಾಲ , ಪರಶುರಾಮ ಭಗತ್ , ಹಿರಿಯರಾದ ನಜೀರ ಶೇಖ , ಅಬ್ಬಾಸ ದೇಸಾಯಿ , ಮೋಸಿನ ಖೋಜಾ , ಎಮ್.ಎ.ಕುಂಬಾರಿ , ಅತ್ತಾರ , ಬುಡೇಬಾಯಿ , ಡಾ.ಇಮ್ರಾನ ದಂಧರಗಿ , ಡಾ. ಖುತೇಜಾ ಮುಲ್ಲಾ (ದಂಧರಗಿ) ‌ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ನಗರದ ಎಲ್ಲ ವೈದ್ಯರು ನೂತನವಾಗಿ ಆಸ್ಪತ್ರೆ ಪ್ರಾರಂಭಿಸಿರುವ  ವೈದ್ಯ ದಂಪತಿಗಳನ್ನು ಅಭಿನಂದಿಸಿದರು

Related posts: