RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ಸಹೋದರನ ಬೆನ್ನಿಗೆ ನಿಂತ ಶಾಸಕ ಸತೀಶ : ರಮೇಶ ಬೆಳವಣಿಗೆ ಸಹಿಸಲಾಗಲಿಲ್ಲ

ಗೋಕಾಕ:ಸಹೋದರನ ಬೆನ್ನಿಗೆ ನಿಂತ ಶಾಸಕ ಸತೀಶ : ರಮೇಶ ಬೆಳವಣಿಗೆ ಸಹಿಸಲಾಗಲಿಲ್ಲ 

ಸಹೋದರನ ಬೆನ್ನಿಗೆ ನಿಂತ  ಶಾಸಕ ಸತೀಶ : ರಮೇಶ ಬೆಳವಣಿಗೆ ಸಹಿಸಲಾಗಲಿಲ್ಲ 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3:

ರಮೇಶ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಆತ ಬೆಳೆಯುವುದನ್ನು ಸಹಿಸಿಕೊಳ್ಳುವುದಕ್ಕೆ ಅವರ ಪಕ್ಷದವರಿಗೆ ಆಗಲಿಲ್ಲ ಎಂದು ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ರಾಜಕೀಯದಲ್ಲಿ ರಮೇಶ್ ಬಹಳಷ್ಟು ಬದಲಾಗಬೇಕಿದೆ. ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ, ಜನರು ಬಹಳ ಮುಖ್ಯ. ಅವರು ನಿನ್ನೆಯೇ ರಾಜೀನಾಮೆ ನೀಡಬೇಕಿತ್ತು. ನಿನ್ನೆ ರಾಜೀನಾಮೆ ಕೊಟ್ಟಿದ್ದರೆ ಮುಗಿಯುತ್ತಿತ್ತು. ದೇಶದಲ್ಲಿ ಇಂತಹ ಘಟನೆಗಳು ಹೊಸದೇನೂ ಅಲ್ಲ. ಪಕ್ಷವೇ ಬೇರೆ, ಜಾರಕಿಹೊಳಿ ಕುಟುಂಬವೇ ಬೇರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Related posts: