RNI NO. KARKAN/2006/27779|Sunday, August 3, 2025
You are here: Home » breaking news » ಚಿಕ್ಕೋಡಿ:ಮೂಡಲಗಿ ತಾಲೂಕ ತಪ್ಪಿಸುವಲ್ಲಿ ರಮೇಶ ಜಾರಕಿಹೊಳಿ ಕೈವಾಡವಿದೆ : ಸ್ವಪಕ್ಷೀಯ ಲಕ್ಕಣ ಸವಸುದ್ದಿ ಆರೋಪ

ಚಿಕ್ಕೋಡಿ:ಮೂಡಲಗಿ ತಾಲೂಕ ತಪ್ಪಿಸುವಲ್ಲಿ ರಮೇಶ ಜಾರಕಿಹೊಳಿ ಕೈವಾಡವಿದೆ : ಸ್ವಪಕ್ಷೀಯ ಲಕ್ಕಣ ಸವಸುದ್ದಿ ಆರೋಪ 

ಮೂಡಲಗಿ ತಾಲೂಕ ತಪ್ಪಿಸುವಲ್ಲಿ ರಮೇಶ ಜಾರಕಿಹೊಳಿ ಕೈವಾಡವಿದೆ : ಸ್ವಪಕ್ಷೀಯ ಲಕ್ಕಣ ಸವಸುದ್ದಿ ಆರೋಪ

ಚಿಕ್ಕೋಡಿ ಸೆ 10: ಮೂಡಲಗಿಗೆ ತಾಲೂಕು ಕೇಂದ್ರದ ಸ್ಥಾನ ಮಾನ ತಪ್ಪಿಸಿರುವ ಹಿಂದೆ ರಾಜಕೀಯ ಪಿತೂರಿ ಇದೆ.   ಕಾಗೋಡು ತಿಮ್ಮಪ್ಪ ಅವರ ಮೇಲೆ ಸಚಿವ ರಮೇಶ ಜಾರಕಿಹೊಳಿ ಅವರು ಒತ್ತಡ ಹಾಕಿ ತಾಲೂಕು ಕೇಂದ್ರವಾಗುವುದರಿಂದ ಮೂಡಲಗಿಯನ್ನು ವಂಚಿಸಿದ್ದಾರೆ ಎಂದು  ಕಾಂಗ್ರೆಸ್‌ನ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಲಕ್ಕಣ್ಣ ಸವಸುದ್ದಿ ಆರೋಪಿಸಿದರು.

ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರವಿವಾರ ಮಾತನಾಡಿದ ಅವರು, ಈ ಹಿಂದೆ ಸರ್ಕಾರ ಘೋಷಿಸಿದ 49 ತಾಲೂಕುಗಳಲ್ಲಿ ಮೂಡಲಗಿಯ ಹೆಸರು ಇತ್ತು. ಸರ್ಕಾರ ಸೆ.6 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಮೂಡಲಗಿ ಪಟ್ಟಣವನ್ನು ಕೈಬಿಟ್ಟು ಉಡುಪಿ ಜಿಲ್ಲೆಯ ಹೆಬ್ರಿ ಪಟ್ಟಣವನ್ನು ಹೊಸ ತಾಲೂಕಾಗಿ ಘೋಷಿಸಲಾಗಿದೆ. ಇದರಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ಕೈವಾಡ ಇರುವುದು ಸ್ಪಷ್ಟವಾಗಿದೆ. ಈ ವಿಷಯವಾಗಿ ಕೆಪಿಸಿಸಿ ಅಧ್ಯಕ್ಷರೊಂದಿಗೂ ಮಾತನಾಡಿದ್ದೇವೆ, ಮೂಡಲಗಿಗೆ ಅನ್ಯಾಯವಾಗಿದೆ ಎಂದರು.

ಕೌಜಲಗಿ ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ರಮೇಶ ಉಟಗಿ ಮಾತನಾಡಿ, ಕೊನೆ ಸಮಯದಲ್ಲಿ ಮೂಡಲಗಿ ತಾಲೂಕು ಕೇಂದ್ರ ಘೋಷಣೆಯಿಂದ  ಏಕೆ ಹಿಂದೆ ಸರಿಯಲಾಯಿತು ಎಂಬುದು ಗೊತ್ತಾಗಿಲ್ಲ.  ಸಚಿವ ರಮೇಶ ಜಾರಕಿಹೊಳಿ ಅವರು ಕಾಗೋಡು ತಿಮ್ಮಪ್ಪ ಅವರ ಮೇಲೆ ಒತ್ತಡ ಹಾಕಿರುವುದು ಸ್ಪಷ್ಟ ಎಂದು ಆರೋಪಿಸಿದರು.

Related posts: