RNI NO. KARKAN/2006/27779|Tuesday, January 27, 2026
You are here: Home » breaking news » ಖಾನಾಪುರ:ಲಿಂಗನಮಠದಲ್ಲಿ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ಚಾಲನೆ

ಖಾನಾಪುರ:ಲಿಂಗನಮಠದಲ್ಲಿ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ಚಾಲನೆ 

ಲಿಂಗನಮಠದಲ್ಲಿ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ರಾಮಕೃಷ್ಣ ಆಶ್ರಮದ ಮೋಹನ ಗುರೂಜಿ ಗುದ್ದಲಿ ಪೂಜೆ ನೆರೆವೆರಿಸಿ ಚಾಲನೆ ನೀಡುತ್ತಿರುವುದು.

ಲಿಂಗನಮಠದಲ್ಲಿ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ಚಾಲನೆ

ಖಾನಾಪುರ ಮಾ 14 : ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಬಹು ಮುಖ್ಯವಾದದ್ದು, ಗಾಯ, ಗಂಗಾ ಮತ್ತು ಗೌರಿಯನ್ನು ರಕ್ಷಿಸಿ ನಮ್ಮ ಸನಾತನ ಸಂಸಕೃತಿಯನ್ನು ಉಳಿಸಿ-ಬೆಳೆಸಿರಿ ಎಂದು ರಾಮಕೃಷ್ಣ ಆಶ್ರಮದ ಮೋಹನ ಗುರೂಜಿ ಹೇಳಿದರು.

ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಂತಹ ನಮ್ಮೂರು ನಮ್ಮ ಕೆರೆ ಪುನಶ್ಚೆತನಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಇಂತಹ ಆಧುನಿಕ ಯುಗದಲ್ಲಿ ನಾವೆಲ್ಲರೂ ಒಂದಾಗಿ ಕೂಡಿ ಬಾಳಿದರೆ ದೇವರನ್ನೆ ಕಾಣಬಹುದು, ಏಕೆಂದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸದಸ್ಯರ ಭಕ್ತಿಗೆ ಮೆಚ್ಚಿ ಸಾಕ್ಷಾತ ಮಂಜುನಾಥನೆ ನಿಮ್ಮೂರಿಗೆ ಬಂದಿದ್ದಾನೆ. ಆದ್ದರಿಂದ ಇಂತಹ ದೊಡ್ಡ ಮಟ್ಟದ ಕೆರೆ ಅಭಿವೃದ್ಧಿಯ ಕಾಮಗಾರಿಯನ್ನು ಇಲ್ಲಿ ಮಾಡಲು ನಿರ್ಧರಿಸಿದ್ದಾರೆ.

ಮುಖ್ಯ ಅತಿತಿಯಾಗಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಜಯಶಂಕರ ಶರ್ಮಾ ಮಾತನಾಡಿ ರಾಜ್ಯಾದ್ಯಾಂತ ಈಗಾಗಲೇ 79ಕೆರೆಗಳ ಅಭಿವೃದ್ಧಿಯಾಗಿದೆ. ಇದು 80ನೇ ಕೆರೆಯಾಗಿದ್ದು ಗ್ರಾಮಸ್ಥರಾದ ನಿವೆಲ್ಲರೂ ಸಹಾಯ-ಸಹಕಾರ ನೀಡಿದರೇ ಇನ್ನತ ಮಟ್ಟದಲ್ಲಿ ಕೆರೆ ಅಭಿವೃದ್ಧಿಯನ್ನು ಕಾಣಬಹುದು. ಜೋತೆಗೆ ಇತ್ತಿಚಿನ ದಿನಗಳಲ್ಲಿ ನಾವೆಲ್ಲರೂ ಸೇರಿಕೊಂಡು ಗ್ರಾಮದಿಂದ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಬಂದ ಮಾಡಿರುವುದರಿಂದ ನೀರಿನ ಶೇಖರಣೆ ಕೆರೆಗಳಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದರು.

ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಾದ ನಾಗರಾಜ ನಿರೂಪಿಸಿದರು. ರಿಯಾಜ ಅತ್ತಾರ ಸ್ವಾಗತಿಸಿದರು. ಗಂಗಮ್ಮಾ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಡಾ.ಕೆ.ಬಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಗಾವಿ ಅಧಿಕಾರಿಯಾದ ಶಿನಪ್ಪ, ಪಿಡಿಒ ಬಿ.ಪಿ.ಚಂದ್ರ, ಗ್ರಾಮಸ್ಥರಾದ ಚಂಬನಗೌಡ ಪಾಟೀಲ, ತವನಪ್ಪ ರಪಾಟಿ, ಎಸ್.ಆರ್.ಮಾಟೋಳ್ಳಿ, ಸಂಘದ ಮಹಿಳಾ ಸದಸ್ಯರಾದ ಸರೋಜಾ ಬಾಗೇವಾಡಿ, ಸುರೇಖಾ ಅಂಬಡಗಟ್ಟಿ, ಅನ್ನಪೂರ್ಣಾ ಬಾಗೇವಾಡಿ, ಮಹೇಶ್ವರಿ ಮಾಟೋಳ್ಳಿ, ಸರ್ವ ಮಹಿಳಾ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

Related posts: