RNI NO. KARKAN/2006/27779|Sunday, May 5, 2024
You are here: Home » breaking news » ಗೋಕಾಕ:ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ : ಮುರುಘರಾಜೇಂದ್ರ ಶ್ರೀ 

ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ : ಮುರುಘರಾಜೇಂದ್ರ ಶ್ರೀ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 

 
ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು

ಶನಿವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಇಲ್ಲಿನ ಗುರುಸ್ಮ್ರತಿ ಬಳಗ,ರಾಹುಲ ಸೊಂಟಕ್ಕಿ ಟ್ರಸ್ಟ್‌ ಮತ್ತು ಶಿವಯೋಗಿ ತತ್ವ ವಿಚಾರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹೊಸ ವರ್ಷದ ಆಕರ್ಷಣೆಯಾಗಿ ಹಮ್ಮಿಕೊಂಡ “ಕತ್ತಲ ಹಾಡು” ಸಂಗೀತ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು

ತತ್ವಪದಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯಮಾಡಿವೆ. ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದು, ಮೌನವನ್ನು ಮಾತಾಗಿಸಿ ಮಾತನ್ನು ಮೌನವಾಗಿಸಿದ ಅದ್ಭುತ ಕಲೆಯಾಗಿದೆ. ಈ ಸಾಹಿತ್ಯ ಕಲೆಯು ತತ್ವ, ಸಿದ್ಧಾಂತ ಹಾಗೂ ಜನರ ಸಂಸ್ಕೃತಿಯನ್ನು ಹೊಂದಿದೆ ಮಾತ್ರವಲ್ಲ ತತ್ವಪದಗಳು ನೋಡಲು ಸರಳವಾಗಿದ್ದರೂ ಜಾತೀಕರಣ ಹಾಗೂ ಸಾಮ್ರಾಜ್ಯಶಾಹಿಯ ಚಿಂತನೆಯ ಒಳಾರ್ಥವನ್ನು ಹೊಂದಿದೆ’ ಎಂದು ಹೇಳಿದರು.

ಬಿಇಒ ಜಿ.ಬಿ.ಬಳಗಾರ ಮಾತನಾಡಿ 21 ಶತಮಾನದಲ್ಲಿ ಇರುವ ನಮಗೆ ಬೆಳಕಿನ ಅವಶ್ಯಕತೆ ಇದೆ. ಕರ್ನಾಟಕದ ಭಕ್ತಿ ಪಂಥಗಳಿಗೆ 3000 ವರ್ಷದ ಪರಂಪರೆಯಿದ್ದು, ತತ್ವಪದಗಳು 12 ನೇ ಶತಮಾನದಲ್ಲಿ ಹುಟ್ಟಿಕೊಂಡಿವೆ. ಈ ತತ್ವಪದಗಳಲ್ಲಿ ಸೂಫಿ ಪರಂಪರೆ, ಶಿಶುನಾಳ ಪರಂಪರೆ, ಅವಧೂತ ಪರಂಪರೆಯಂತಹ ಹಲವಾರು ಪರಂಪರೆಗಳಿದ್ದು, ಇವು ಸೌಹಾರ್ದತೆಯನ್ನು ಉಂಟುಮಾಡುವುದಷ್ಟೆ ಅಲ್ಲ ಮೌಲ್ಯಗಳನ್ನು ಕೂಡ ನೀಡಿವೆ ಶತಮಾನಗಳ ಹಿಂದೆ ಸಂತರು, ಸೂಫಿಯರು ನಮಗೆ ಮಾಡಿದ ಮಾರ್ಗದರ್ಶನದಂತೆ ನಾವು ಜೀವನ ನಡೆಸಬೇಕಾಗಿದೆ. ಇಂದು ಅಜ್ಞಾನದ ಅಂದಕಾರ ನಮ್ಮನ್ನು ಸುತ್ತುಕೊಂಡಿದೆ. ಅದನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ನಾದ ಮಣಿನಾಲ್ಕೂರು ಅವರು ತತ್ವ ಪದಗಳ ಮೂಲಕ ನಾಡಿನಾದ್ಯಂತ ಕತ್ತಲ ಹಾಡು ಎಂಬ ಕಾರ್ಯಕ್ರಮಗಳನ್ನು ನೀಡಿ ಜಾನಪದ ಸಂಗೀತವನ್ನು ಜೀವಂತ ಇಡುವ ಕಾರ್ಯಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ.ಸಿ.ಕೆ ನಾವಲಗಿ ವಹಿಸಿದ್ದರು.
ಕಾರ್ಯಕ್ರಮವನ್ನು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಶ್ರೇಗೆಂರಿಯ “ನಾದ ಮಣಿನಾಲ್ಕೂರು ಅವರಿಂದ ತತ್ವ ಪದಗಳ ಮೂಲಕ “ಕತ್ತಲ ಹಾಡು” ಸಂಗೀತ ಕಾರ್ಯಕ್ರಮ ಜರುಗಿತ್ತು.

ವೇದಿಕೆಯಲ್ಲಿ ಮುಖಂಡರುಗಳಾದ ಕಾಶಪ್ಪ ಕಲಾಲ, ಅರುಣ ಪೂಜೇರಾ, ನಮಿತಾ ಸೊಂಟಕ್ಕಿ ಇದ್ದರು

ಕಾರ್ಯಕ್ರಮವನ್ನು ಶಿಕ್ಷಕ ಎಸ.ಕೆ ಮಠದ ನಿರೂಪಿಸಿ, ವಂದಿಸಿದರು .

Related posts: