RNI NO. KARKAN/2006/27779|Friday, April 19, 2024
You are here: Home » breaking news » ಗೋಕಾಕ:ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ಬಾಂಧವರು ಸಂಘಟಿತರಾಗಿ ಹೋರಾಟದಲ್ಲಿ ಭಾಗವಹಿಸಿ : ಬಸವ ಜಯ ಮೃಂತ್ಯುಂಜಯ ಶ್ರೀ

ಗೋಕಾಕ:ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ಬಾಂಧವರು ಸಂಘಟಿತರಾಗಿ ಹೋರಾಟದಲ್ಲಿ ಭಾಗವಹಿಸಿ : ಬಸವ ಜಯ ಮೃಂತ್ಯುಂಜಯ ಶ್ರೀ 

ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ಬಾಂಧವರು ಸಂಘಟಿತರಾಗಿ ಹೋರಾಟದಲ್ಲಿ ಭಾಗವಹಿಸಿ : ಬಸವ ಜಯ ಮೃಂತ್ಯುಂಜಯ ಶ್ರೀ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 3 :

 

2 ಎ ಮತ್ತು ಓಬಿಸಿ ಮೀಸಲಾತಿ ಪಡೆಯಲು ಪಂಚಮಸಾಲಿ ಸಮಾಜ ಭಾಂಧವರು ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ನಾವು ಮೀಸಲಾತಿ ಪಡೆದುಕೊಂಡು ಜಯ ಸಾಧಿಸಲು ಸಾಧ್ಯ ಎಂದು ಕೂಡಲ ಸಂಗಮದ ಜಗದ್ಗುರು ಶ್ರೀ ಬಸವ ಜಯ ಮೃಂತ್ಯುಂಜಯ ಮಹಾಸ್ವಾಮಿಗಳು ಹೇಳಿದರು
ಗುರುವಾರದಂದು ನಗರದ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ತಾಲುಕಾ ಘಟಕ ಹಮ್ಮಿಕೊಂಡ ಪದಾಧಿಕಾರಿಗಳ ಆಯ್ಕೆ ಮತ್ತು ಕೊರೋನಾ ವಾರಿಯರ್ಸ್ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಬಟ್ಟೆ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಪಂಚಮಸಾಲಿ ಲಿಂಗಾಯತ ಸಮಾಜದಲ್ಲಿ ಸಾಕಷ್ಟು ಒಳ ಪಂಗಡಗಳಿವೆ 2 ಎ ಮಿಸಲಾತಿ ಸಿಕ್ಕರೆ ಸಮಾಜವು ಶೈಕ್ಷಣಿಕವಾಗಿ, ಸಮಾಜಿಕವಾಗಿಅಭಿವೃದ್ಧಿ ಹೊಂದುತ್ತದೆ. ಇಂದು ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಎಷ್ಷೇ ಅಂಕ ಪಡೆದು ಉತ್ತಿರ್ಣವಾದರು ಸಹ ನೌಕರಿ ಪಡೆಯಲು ಸಾಧ್ಯವಾಗುತ್ತಿಲ್ಲ , ಮೀಸಲಾತಿ ದೊರೆತರೆ ಸಮಾಜ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಪಂಚಮಸಾಲಿ ಸಮಾಜದ ಹಲವು ಜನರು ಶಾಸಕರಾಗಿ , ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ‌ ಆದರೆ ಅವರುಗಳ ಅಧಿಕಾರದ ಮಿತಿಯಲ್ಲಿ ಸಮಾಜಕ್ಕೆ 2 ಮೀಸಲಾತಿ ಮತ್ತು ಓಬಿಸಿ ದೊರಕಿಸಲು ಆಗುತ್ತಿಲ್ಲ ಯಡಿಯೂರಪ್ಪ ಸರಕಾರ ಇದನ್ನು ಅರ್ಥಮಾಡಿಕೊಂಡು ಪಂಚಮಸಾಲಿ ಸಮಾಜಕ್ಕೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ, ಓಬಿಸಿ ಕಲ್ಪಿಸಲು ಮುಂದಾಗಬೇಕು.

ಸಂವಿಧಾನದಲ್ಲಿ ಪಂಚಮಸಾಲಿ ಸಮಾಜದ ಹೆಸರು ಶಾಶ್ವತವಾಗಿ ಉಳಿಯಲು ಮೀಸಲಾತಿ ಅವಶ್ಯಕವಾಗಿದೆ. ಸಮಾಜಕ್ಕೆ ಮೀಸಲಾತಿ ದೊರಕಿಸಲು ಬರುವ ಡಿ. 23 ಕ್ಕೆ ಕೂಡಲ ಸಂಗಮದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಎಲ್ಲ ಭಾಂಧವರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಜಯ ಮೃಂತ್ಯುಂಜಯ ಮಹಾಸ್ವಾಮಿಗಳು ವಿನಂತಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಪ್ರಕಾಶ ಬಾಗೋಜಿ ವಹಿಸಿದ್ದರು.ರೇವಣ್ಣ ಮಹಾಲಿಂಗಪೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೊರೋನಾ ಮಹಾಮಾರಿ ಸಂಧರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಗೋಕಾಕ ನಗರಸಭೆಯ ಎಲ್ಲ ಪೌರ ಕಾರ್ಮಿಕರಿಗೆ ಸನ್ಮಾನಿಸಿ , ಬಟ್ಟೆ ವಿತರಿಸಲಾಯಿತು.
ಕಾರ್ಯಕ್ರಮವನ್ನು ಶ್ರೀಮತಿ ಶೈಲಾ ಕೊಕ್ಕರಿ ನಿರೂಪಿಸಿ , ವಂದಿಸಿದರು

ವೇದಿಕೆಯಲ್ಲಿ ಸಮಾಜದ ಮುಖಂಡರುಗಳಾದ ಎಫ್ .ಎಸ್.ಸಿದ್ದನಗೌಡರ, ಬಸವರಾಜ ರೊಟ್ಟಿ , ಡಾ.ರವಿ ಪಾಟೀಲ, ಸುರೇಶ ಪಾಟೀಲ, ಮಹಾಂತೇಶ ವಾಲಿ, ಎಂ.ಸಿ ಮಾಸ್ತಿಹೋಳಿ ಇದ್ದರು.

Related posts: