ಗೋಕಾಕ:ಪ್ರತಿಯೊಬ್ಬ ಮಹಿಳೆಯ ಸಾಧನೆಯ ಹಿಂದೆ ಪುರುಷರ ಪಾತ್ರ ಮಹತ್ವದಾಗಿದೆ : ಸುಸ್ಮಿತಾ ಭಟ್

ಪ್ರತಿಯೊಬ್ಬ ಮಹಿಳೆಯ ಸಾಧನೆಯ ಹಿಂದೆ ಪುರುಷರ ಪಾತ್ರ ಮಹತ್ವದಾಗಿದೆ : ಸುಸ್ಮಿತಾ ಭಟ್
ಗೋಕಾಕ ಮಾ 27 : ಪ್ರತಿಯೊಬ್ಬ ಮಹಿಳೆಯ ಸಾಧನೆಯ ಹಿಂದೆ ಪುರುಷರ ಪಾತ್ರ ಮಹತ್ವದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸುಸ್ಮಿತಾ ಭಟ್ ಹೇಳಿದರು
ರವಿವಾರದಂದು ನಗರದಲ್ಲಿ ಜಿ.ಸಿ.ಐ ಸಂಸ್ಥೆಯವರು ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಮಹಿಳೆ ಒಬ್ಬರು ಕಲಿತರೆ ಇಡಿ ಕುಟುಂಬ ಸಾಕ್ಷರತೆಯಾಗುತ್ತದೆ. ತಾಯಿಯೆ ಮೊದಲ ಗುರುಯಾಗಿದ್ದು, ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ. ಬದುಕಿನಲ್ಲಿ ಸ್ತ್ರೀ ಮತ್ತು ಪುರುಷ ಸಮಾನರೆಂದು ತಿಳಿದು ಬದುಕಿದರೆ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಅತ್ತೆ ಸೊಸೆಯಂದಿರ ನಡುವೆ ಒಳ್ಳೆಯ ಬಾಂಧವ್ಯವನ್ನು ಹೆಚ್ಚಿಸುವಂತ ಸ್ವರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವನ್ನು ಜೆಸಿಐ ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ನಂದಗಾವಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೇಯಾ ಜಾಧವ್, ಶ್ಮೀತಾ ದುದಾಳೆ, ಧರಣಿ ಜರತಾರಕರ, ಶೋಭಾ ಕುರಬೇಟ್, ಜೆಸಿಐ ವಲಯ ಉಪಾಧ್ಯಕ್ಷ ವಿಷ್ಣು ಲಾತೂರ, ಜೆಸಿಐ ಅಧ್ಯಕ್ಷ ಶೇಖರ್ ಉಳ್ಳೇಗಡಿ,ಜೆಸಿಐ ಪದಾಧಿಕಾರಿಗಳಾದ ರಾಜೇಶ್ವರಿ ಹಳ್ಳಿ, ಮಿನಾಕ್ಷಿ ಸವದಿ, ನೇತ್ರಾವತಿ ಲಾತೂರ, ರಾಜೇಶ್ವರಿ ಕಿತ್ತೂರ, ಪ್ರಜ್ಜಾ ಜಾಧವ, ಪೃಥ್ವಿ ಲಾತೂರ , ಕವಿತಾ ತುಪ್ಪದ ಉಪಸ್ಥಿತರಿದ್ದರು.