ಗೋಕಾಕ:ಮೋದಿ ಚೌಕಿದಾರ ಅಲ್ಲ ಬ್ರಷ್ಟಾಚಾರದಲ್ಲಿ ಭಾಗಿದಾರ : ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಮೋದಿ ಚೌಕಿದಾರ ಅಲ್ಲ ಬ್ರಷ್ಟಾಚಾರದಲ್ಲಿ ಭಾಗಿದಾರ : ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ನಮ್ಮ ಬೆಳಗಾವಿ ಸುದ್ದಿ ಗೋಕಾಕ ಏ 20 :
ಪ್ರಧಾನಿ ಚೌಕಿದಾರ ಅಲ್ಲಾ ಬ್ರಷ್ಟಾಚಾರದಲ್ಲಿ ಬಾಗೀಧಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು
ಶುಕ್ರವಾರದಂದು ಸಾಯಂಕಾಲ ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಲೋಕಸಭಾ ಚುನಾವಣಾ ಅಂಗವಾಗಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಅಭ್ಯರ್ಥಿ ಸಾಧುನವರ ಅವರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು
ಚೌಕಿದಾರ ಎಂದು ಬೀಗುತ್ತಿರುವ ಪ್ರಧಾನಿ ಮೋದಿ ಅವರು ಜೈಲಿಗೆ ಹೋಗಿ ಬಂದ ಅಮಿತ ಶಾ , ಯಡಿಯೂರಪ್ಪ , ಹಾಲಪ್ಪ , ಕಟ್ಟಾಸುಭ್ರಮನ್ಯನಾಯ್ಡು , ಜನಾರ್ಧನ ರೆಡ್ಡಿ , ಅಂಭಾನಿ ,ಅಧಾನಿ ,ನಿರವ ಮೋದಿ , ವಿಜಯ ಮಲ್ಯ , ಚೋಕ್ಸಿ , ಸೇರಿದಂತೆ ಅನೇಕರಿಗೆ ಬ್ರಷ್ಟಾಚಾರಲ್ಲಿ ತೋಡಗಲು ಸಹಕರಿಸಿದ ಪ್ರಧಾನಿ ಮೋದಿ ಚೌಕಿದಾರ ಎಂದು ದೇಶದ ಜನತೆಗೆ ಮೋಸ ಮಾಡುತ್ತಿದ್ದನೆ .
ನಾನು ಸಿಎಂ ಇದ್ದಾಗ ಅನ್ನಭಾಗ್ಯ , ಕೃಷಿಭಾಗ್ಯ , ಕ್ಷೀರಭಾಗ್ಯ , ಶೂ ಭಾಗ್ಯ , ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿ ಬಡವರ , ದಿನ ದಲಿತರ ಪರ ನಿಂತು ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ . ರೈತರಿಗೆ 18 ಸಾವಿರ ಕೋಟಿ ರೂ ಸಬ್ಬಸಿಡಿ ನೀಡಿ ರೈತರ 50 ಸಾವಿರದಷ್ಟು ಸೋಸೈಟಿ ಸಾಲ ಮನ್ನಾ ಮಾಡಿ ಒಟ್ಟು 8155 ರೂ ಕೋಟಿ ಸಾಲಮನ್ನಾ ಮಾಡಿದೆ ಇಲ್ಲಾ ಯೋಜನೆಗಳನ್ನು ಗಮದಲ್ಲಿಟ್ಟು ಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸಾಧುನವರ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದರು .
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಸ್ಥಳೀಯವಾಗಿರುವ ಗೊಂದಲಗಳನ್ನು ಬದಿಗಿಟ್ಟು ಜನಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ದೇಶದಲ್ಲಿ ಅತಂತ್ಯ ಹೆಚ್ಚು ಕಲ್ಯಾಣ ಕಾರ್ಯಕ್ರಮ ನೀಡಿ ಜನ ಮೆಚ್ಚುಗೆ ಪಡೆದುಕೊಂಡಿರುವ ಸಿದ್ದರಾಮಯ್ಯ ನವರ ಮತ್ತು ರಾಹುಲ್ ಗಾಂಧಿ ಅವರ ಕೈ ಬಲ ಪಡಿಸಬೇಕಾಗಿದೆ . ಕಳೆದ ಮೂರು ಅವಧಿಗೆ ಸಸಂದರಾಗಿ ಅಂಗಡಿವರ ಸಾಧನೆ ಶೂನ್ಯವಾಗಿದೆ . ಐದು ವರ್ಷಕೋಮ್ಮೆ ಕ್ಷೇತ್ರದಲ್ಲಿ ಕಾಣುವ ಸುರೇಶ ಅಂಗಡಿಗೆ ಮತದಾರರು ತಕ್ಕ ಪಾಠ ಕಲಿಸಬೇಕಾಗಿದೆ ಆದ್ದರಿಂದ ಮತದಾರರು ಕಾಂಗ್ರೆಸ್ ಪಕ್ಷ ಮತನೀಡಿ ಮೈತ್ರಿ ಅಭ್ಯರ್ಥಿ ಸಾಧುನವರ ಅವರನ್ನು ಗೆಲ್ಲಿಸಬೇಕೆಂದು ಸಚಿವರು ಮನವಿ ಮಾಡಿಕೊಂಡರು
ಯುವ ಮುಖಂಡ ಲಖನ ಜಾರಕಿಹೊಳಿ ಮಾತನಾಡಿ ಗೋಕಾಕ ಮತಕ್ಷೇತ್ರ ಕಾಂಗ್ರೆಸ್ ನ ಬದ್ರಕೋಟೆ ಯಾಗಿದ್ದು ಮತದಾರರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದು ಈ ಚುನಾವಣೆಯಲ್ಲಿಯೂ ಯಾರ ಮಾತಿಗೆ ಕಿವಿ ಒಡ್ಡದೆ ಕಾಂಗ್ರೆಸ್ ಪರ ಮತ ಚಲಾಯಿಸಿ ಸಿದ್ದರಾಮಯ್ಯ ಮತ್ತು ಸತೀಶ ಜಾರಕಿಹೊಳಿ ಅವರ ಕೈ ಬಲ ಪಡಿಸಬೇಕು . ಬರುವ ದಿನಗಳಲ್ಲಿ ಮತ್ತೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಯಾಗಲಿದ್ದಾರೆಂದು ಭವಿಷ್ಯ ನುಡಿದರು .
ಈ ಸಂದರ್ಭದಲ್ಲಿ ಡಾ.ವ್ಹಿ.ಎಸ್ ಸಾಧುನವರ , ವೀರ ಕುಮಾರ ಪಾಟೀಲ , ಜಿಪಂ ಅಧ್ಯಕ್ಷ ಶ್ರೀಮತಿ ಆಶಾ ಐಹೊಳೆ , ಮಾಜಿ ಶಾಸಕ ಫಿರೋಜ ಸೇಠ, ಮಾಜಿ ಶಾಸಕ ಶಾಮ ಘಾಟಕೆ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ , ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ , ಗೋಕಾಕ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಜೀರ ಶೇಖ, ರಾಜು ಸೇಠ , ಅರವಿಂದ ದಳವಾಯಿ, ರಮೇಶ ಉಟಗಿ , ಡಾ.ರಾಜೇಂದ್ರ ಸಣ್ಣಕ್ಕಿ , ಸಿದ್ದಲಿಂಗ ದಳವಾಯಿ , ಬಾಳಪ್ಪ ಬೆಳಕೂಡ , ವಿದ್ಯಾ ಹಿರೇಮಠ , ಸೇರಿದಂತೆ ಇತರರು ಇದ್ದರು