RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಮದರಸಾದ ಅಧ್ಯಕ್ಷರ ವರ್ತನೆಗೆ ಬೆಸತ್ತು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ : ಹುಣಶ್ಯಾಳ ಗ್ರಾಮದಲ್ಲಿ ಘಟನೆ

ಗೋಕಾಕ:ಮದರಸಾದ ಅಧ್ಯಕ್ಷರ ವರ್ತನೆಗೆ ಬೆಸತ್ತು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ : ಹುಣಶ್ಯಾಳ ಗ್ರಾಮದಲ್ಲಿ ಘಟನೆ 

ಮದರಸಾದ ಅಧ್ಯಕ್ಷರ ವರ್ತನೆಗೆ ಬೆಸತ್ತು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ : ಹುಣಶ್ಯಾಳ ಗ್ರಾಮದಲ್ಲಿ ಘಟನೆ

ಗೋಕಾಕ ಸೆ.1 : ತಾಲೂಕಿನ ಹುಣಶ್ಯಾಳ ಪಿ.ಜಿ.(ಶುಗರ ಫ್ಯಾಕ್ಟರಿ) ಗ್ರಾಮದ ಮದರಸಾ ಅರಬಿಯಾ ನಿಜಾಮುಲ್ ಊಲುಮ ಸಂಸ್ಥೆಯ 8 ಜನ ನಿರ್ದೇಶಕರು ಸಂಸ್ಥೆಯ ಅಧ್ಯಕ್ಷ ವರ್ತನೆಗೆ ಬೆಸತ್ತು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಘಟನೆ ಜರುಗಿದೆ.

ಸಂಸ್ಥೆಯ ನಿರ್ದೇಶಕರಾದ ಅಪ್ಪಾಸಾಬ ನದಾಫ, ಮಹ್ಮದಸಾಬ ಮುಲ್ಲಾ, ನಬೀಸಾಬ ನದಾಫ, ಹಸನಸಾಬ ನದಾಫ, ಮೀರಾಸಾಬ ಜಮಾದಾರ, ಜಿನ್ನಾಸಾಬ ತಹಶೀಲದಾರ, ಅಕ್ಬರಸಾಬ ಮಕಾನದಾರ, ಸಾಬುದಿನ್ನ್ ನದಾಫ ಅವರು ಸಂಸ್ಥೆಯ ಅಧ್ಯಕ್ಷ ಹಾಗೂ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ರಾಜೀನಾಮೆಯನ್ನು ಪತ್ರವನ್ನು ನೀಡಿದ್ದಾರೆ.

ಮದರಸಾ ಅರಬಿಯಾ ನಿಜಾಮುಲ್ ಊಲುಮ (ರಿ) ಸಂಸ್ಥೆಯ ಕಳೆದ 3 ವರ್ಷಗಳ ಹಿಂದೆ ಜಿಲ್ಲಾ ನೊಂದಣಿ ಅಧಿಕಾರಿಗಳ ಕಛೇರಿಯಲ್ಲಿ ನೊಂದಣಿಯಾದ ಸಂದರ್ಭದಿಂದ ಇಲ್ಲಿಯವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ನಿಜಾಮಸಾಬ ಫತ್ತೆಸಾಬ ಜಮಾದಾರ ಅವರು, ನಿರ್ದೇಶಕರೊಂದಿಗೆ ಸರಿಯಾಗಿ ವರ್ತಿಸದೆ, ಮದರಸಾ ಪ್ರಾರಂಭವಾದಗಿನಿಂದ ತಿಂಗಳಿಗೊಮ್ಮೆ ಸಭೆಗಳನ್ನು ಕರೆಯದೆ, ಚಂದಾ ಹಾಗೂ ವಿವಿಧ ಮೂಲಗಳಿಂದ ಬಂದ ಹಣದ ಲೆಕ್ಕಪತ್ರಗಳನ್ನು ತೋರಿಸಿದೇ ಸರ್ವಾಧಿಕಾರಿತನದ ಧೋರಣೆಯಿಂದ ಮನನೊಂದು ರಾಜೀನಾಮೆಯನ್ನು ನೀಡುತ್ತಿದ್ದೇವೆ. ಇನ್ನು ಮುಂದೆ ನಮಗೆ ಸಂಸ್ಥೆಯೊಂದಿಗೆ ಯಾವುದೇ ಸಂಬಂಧವಿರುವದಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

Related posts: