RNI NO. KARKAN/2006/27779|Wednesday, January 28, 2026
You are here: Home » breaking news » ಗೋಕಾಕ:ಅಗತ್ಯ ವಸ್ತುಗಳಿಗೆ ಹೊರ ಬರಬೇಕಾದರೇ ಮಾಸ್ಕಗಳನ್ನು ಧರಿಸಿ : ಪಿಎಸ್‍ಐ ನಾಗರಾಜ ಖಿಲಾರೆ

ಗೋಕಾಕ:ಅಗತ್ಯ ವಸ್ತುಗಳಿಗೆ ಹೊರ ಬರಬೇಕಾದರೇ ಮಾಸ್ಕಗಳನ್ನು ಧರಿಸಿ : ಪಿಎಸ್‍ಐ ನಾಗರಾಜ ಖಿಲಾರೆ 

ಅಗತ್ಯ ವಸ್ತುಗಳಿಗೆ ಹೊರ ಬರಬೇಕಾದರೇ ಮಾಸ್ಕಗಳನ್ನು ಧರಿಸಿ : ಪಿಎಸ್‍ಐ ನಾಗರಾಜ ಖಿಲಾರೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 8 :

 

 

ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಎಲ್ಲ ತಮ್ಮ ತಮ್ಮ ಮನೆಗಳಲ್ಲಿ ಇದ್ದು, ಅಗತ್ಯ ವಸ್ತುಗಳಿಗೆ ಹೊರಬರಬೇಕಾದರೇ ಮಾಸ್ಕಗಳನ್ನು ಧರಿಸುವಂತೆ ಗೋಕಾಕ ಗ್ರಾಮೀಣ ಠಾಣೆಯ ಪಿಎಸ್‍ಐ ನಾಗರಾಜ ಖಿಲಾರೆ ಹೇಳಿದರು.
ಅವರು, ಬುಧವಾರದಂದು ಮಾಣಿಕವಾಡಿ, ಗೋಡಚಿನಮಲ್ಕಿ ಗ್ರಾಮಗಳಲ್ಲಿ ನಾಗರಿಕರಿಗೆ ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ, ಕರೋನಾ ಬಗ್ಗೆ ಜಾಗೃತಿ ಮೂಢಿಸಿ ಮಾತನಾಡಿ, ಕರೋನಾ ಸೋಂಕು ತಡೆಗಟ್ಟಲು ಸರಕಾರದ ಆದೇಶ ಪಾಲನೆ ಮಾಡಿ, ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ತಮ್ಮ ಗಲ್ಲಿ ಹಾಗೂ ಅಕ್ಕಪಕ್ಕದ ಮನೆಗಳಿಗೆ ಯಾರಾದರೂ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದರೆ ತಕ್ಷಣವೇ ತಮ್ಮನ್ನೂ ಹಾಗೂ ವೈದ್ಯಾಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂಧಿಗಳು, ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂಧಿ ಹಾಗೂ ಗ್ರಾಮಸ್ಥರು ಇದ್ದರು.

Related posts: