RNI NO. KARKAN/2006/27779|Wednesday, August 12, 2026
You are here: Home » breaking news » ಗೋಕಾಕ:ಎಸ್‍ಎಫ್‍ಸಿ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್‍ ವಿತರಿಸದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಎಸ್‍ಎಫ್‍ಸಿ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್‍ ವಿತರಿಸದ ಶಾಸಕ ಬಾಲಚಂದ್ರ ಜಾರಕಿಹೊಳಿ 

ಎಸ್‍ಎಫ್‍ಸಿ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್‍ ವಿತರಿಸದ  ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಅ 27 : 2017-18ನೇ ಸಾಲಿನ ಎಸ್‍ಎಫ್‍ಸಿ ಯೋಜನೆಯಡಿ ಸಿಲಿಂಡರ್ ಹಾಗೂ ಲ್ಯಾಪಟಾಪ್‍ಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಪಟ್ಟಣ ಪಂಚಾಯತಿಯಿಂದ ವಿತರಿಸಿದರು.

42 ಪ.ಜಾತಿ, 10 ಪ.ಪಂಗಡ, 7 ಅಂಗವಿಕಲರಿಗೆ ಹಾಗೂ 17ಸಾಮಾನ್ಯ ವರ್ಗದವರಿಗೆ ಸೇರಿ ಒಟ್ಟು 76 ಸಿಲಿಂಡರ್‍ಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ವಿತರಿಸಿದರು. ಇದೇ ಸಂದರ್ಭದಲ್ಲಿ ಬಿಇ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳಿಗೆ ಲ್ಯಾಪಟಾಪ್‍ಗಳನ್ನು ವಿತರಿಸಿದರು.

ಅರಭಾವಿ ಪಪಂ ಉಪಾಧ್ಯಕ್ಷ ರಮೇಶ ಮಾದರ, ರಾಯಪ್ಪ ಬಂಡಿವಡ್ಡರ, ಅಡಿವೆಪ್ಪ ಬಿಲಕುಂದಿ, ಮಹಾಂತೇಶ ನೇಮಗೌಡರ, ಲಕ್ಷ್ಮಣ ನಿಂಗನ್ನವರ, ರವಿ ಹುಕ್ಕಿ, ಈರಪ್ಪ ಹೊಲದವರ, ಕುಮಾರ ಪೂಜೇರಿ, ವಿಠ್ಠಲ ದೇವುಗೋಳ, ಮುಖ್ಯಾಧಿಕಾರಿ ಕೆ.ಬಿ. ಬೆಣ್ಣಿ ಉಪಸ್ಥಿತರಿದ್ದರು.

Related posts: