RNI NO. KARKAN/2006/27779|Saturday, August 2, 2025
You are here: Home » breaking news »

 

ಗಾರ್ಡನ್ ಅಭಿವೃದ್ದಿ ಸಂಸ್ಥೆ ಹಾಗೂ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘ ವತಿಯಿಂದ ವ್ಯಾಪಾರಸ್ಥರಿಗೆ ಮಾಸ್ಕ್ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಎ 2 :

 

 

ದೇಶದಲ್ಲಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತೆವಹಿಸುವ ಕುರಿತು ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆ ಹಾಗೂ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ವಾರ್ಡ್ 2ರಲ್ಲಿನ ತರಕಾರಿ ಮಾರಾಟ ಸ್ಥಳದಲ್ಲಿ ವ್ಯಾಪರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಗುರುವಾರ ಮಾಸ್ಕ್ ಮತ್ತು ಹ್ಯಾಂಡ್ ಸೇನಿಟಜರ್ ವಿತರಿಸಿ ಆರೋಗ್ಯದ ಬಗ್ಗೆ ಎಚ್ಚರ ಮತ್ತು ಜಾಗೃತಿವಹಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು.
ಪುರಸಭೆ ಸದಸ್ಯ ಶಿವಪ್ಪ ಚಂಡಕಿ ಅವರು ವ್ಯಾಪಾರಸ್ಥರಿಗೆ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್ ವಿತರಿಸಿ ಕೊರೋನ ವೈರಾಸ್ ಬಗ್ಗೆ ಭಯ ಪಡಬೇಡಿ ಮುಂಜಾಗ್ರತೆ ವಹಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎಮ್.ಆಯ್.ಬಡಿಗೇರ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಭಗವಂತ ಉಪ್ಪಾರ, ರಾಜಶೇಖರ ಮಗದುಮ್, ಭೀಮಶಿ ಸೋರಗಾಂವಿ, ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ ಗೊಡ್ಯಾಗೋಳ, ಜ್ಯೋತಿಬಾ ರೇಳೆಕರ, ರೇವತಿ ಮರಡಿ, ವಿಜಯ ಲಕ್ಷ್ಮೀ ಮತ್ತಿತರರು ಇದ್ದರು.

Related posts: