ಗೋಕಾಕ:ಅಗತ್ಯಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ಕಠಿಣ ಕ್ರಮ : ಔಷಧಿ ಹಾಗೂ ಕಿರಾಣಿ ದಿನಸಿ ಅಂಗಡಿಕಾರರಿಗೆ ತಹಶೀಲ್ದಾರ ಪ್ರಕಾಶ ವಾರ್ನಿಂಗ್
ಅಗತ್ಯಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ಕಠಿಣ ಕ್ರಮ : ಔಷಧಿ ಹಾಗೂ ಕಿರಾಣಿ ದಿನಸಿ ಅಂಗಡಿಕಾರರಿಗೆ ತಹಶೀಲ್ದಾರ ಪ್ರಕಾಶ ವಾರ್ನಿಂಗ್
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 31 :
ಔಷಧಿ ಅಂಗಡಿಕಾರರು ಮಾಸ್ಕ ಮತ್ತು ಕಿರಾಣಿ ದಿನಸಿ ಅಂಗಡಿಗಾರರು ತಾತ್ಕಾಲಿಕ ಕೊರತೆ ಸೃಷ್ಟಿಸಿ ಸಾರ್ವಜನಿಕರಿಂದ ಹೆಚ್ಚಿನ ದರ ವಸೂಲಿ ಮಾಡಿದ್ದು ಕಂಡು ಬಂದರೆ ಅಂತವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು
ಸೋಮವಾರದಂದು ನಗರದ ತಮ್ಮ ಕಛೇರಿಯಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು
ಲಾಕಡೌನ ಪರಿಸ್ಥಿತಿಯ ದುರುಪಯೋಗ ಪಡೆದು ಕೆಲ ಔಷಧಿ ಅಂಗಿಡಿಕಾರರು ಮತ್ತು ಕಿರಾಣಿ ,ದಿನಸಿ ಅಂಗಡಿಕಾರರು ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ . ಅಂತಹ ಅಂಗಡಿಕಾರರಿಗೆ ಇದು ಕೊನೆಯ ಎಚ್ಚರಿಕೆಯಾಗಿದ್ದು , ಮುಂದೆ ಈ ರೀತಿ ಯಾಗದಂತೆ ಎಚ್ಚರಿಕೆ ವಹಿಸಬೇಕು ಇದನ್ನು ಮೀರಿಯು ಸಹ ಸಾರ್ವಜನಿಕರಿಂದ ಹೆಚ್ಚಿನ ದರ ಮಾಡಿದ ಕುರಿತು ಯಾವುದೆ ದೂರುಗಳು ಬಂದರೆ ಕಠಿಣ ಕ್ರಮ ಕೈಗೋಳ್ಳಲಾಗುವದು .
ಇಂತಹ ತುರ್ತು ಪರಿಸ್ಥಿತಿಯಲ್ಲಿ ವ್ಯಾಪಾರಸ್ಥರು ಲಾಭವನ್ನು ಬದಿಗೋತ್ತಿ ಸಾರ್ವಜನಿಕರ ಸೇವೆ ಗೈಯ್ಯಲು ಮುಂದಾಗಿ ಮಾರುಕಟ್ಟೆ ದರವನ್ನು ಮಾತ್ರ ಪಡೆದು ಸರಕಾರದ ನಿರ್ದೇಶನವನ್ನು ಪಾಲಿಸಬೇಕು . ಒಂದು ವೇಳೆ ಸೂಚನೆಯನ್ನು ಗಾಳಿಗೆ ತೂರಿ ಸಾರ್ವಜನಿಕರಿಂದ ಬೇಕಾಬಿಟ್ಟಿಯಾಗಿ ಹೆಚ್ಚಿನ ದರ ವಸೂಲಿ ಮಾಡಿದರ ಬಗ್ಗೆ ಕಂಡು ಬಂದರೆ ಯಾವದೇ ಮೂಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಅಂಗಡಿಕಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ