RNI NO. KARKAN/2006/27779|Monday, April 20, 2026
You are here: Home » breaking news » ಗೋಕಾಕ:ಜೆಸಿಐ ಸಂಸ್ಥೆಯ ಅಧ್ಯಕ್ಷರಾಗಿ ರಜನಿಕಾಂತ ಮಾಳೋದೆ, ಕಾರ್ಯದರ್ಶಿಯಾಗಿ ಶೇಖರ ಉಳ್ಳೆಗಡ್ಡಿ ಆಯ್ಕೆ

ಗೋಕಾಕ:ಜೆಸಿಐ ಸಂಸ್ಥೆಯ ಅಧ್ಯಕ್ಷರಾಗಿ ರಜನಿಕಾಂತ ಮಾಳೋದೆ, ಕಾರ್ಯದರ್ಶಿಯಾಗಿ ಶೇಖರ ಉಳ್ಳೆಗಡ್ಡಿ ಆಯ್ಕೆ 

ಜೆಸಿಐ ಸಂಸ್ಥೆಯ ಅಧ್ಯಕ್ಷರಾಗಿ ರಜನಿಕಾಂತ ಮಾಳೋದೆ, ಕಾರ್ಯದರ್ಶಿಯಾಗಿ ಶೇಖರ ಉಳ್ಳೆಗಡ್ಡಿ ಆಯ್ಕೆ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 7 :

 
ಇಲ್ಲಿಯ ಜೆಸಿಐ ಸಂಸ್ಥೆಯ ಅಧ್ಯಕ್ಷರಾಗಿ ರಜನಿಕಾಂತ ಮಾಳೋದೆ, ಕಾರ್ಯದರ್ಶಿಯಾಗಿ ಶೇಖರ ಉಳ್ಳೆಗಡ್ಡಿ ಆಯ್ಕೆಯಾಗಿದ್ದಾರೆ. ದಿ. 8 ರಂದು ಸಂಜೆ 6.30 ಗಂಟೆಗೆ ನಗರದ ಸಮುದಾಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಇತರ ಪದಾಧಿಕಾರಿಗಳೊಂದಿಗೆ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು, ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಮಹಾವೀರ ಖಾರೇಪಾಟಣ ವಹಿಸುವರು. ಅಧಿಕಾರ ಹಸ್ತಾಂತರ ಅಧಿಕಾರಿಗಳಾಗಿ ವಲಯ ಉಪಾಧ್ಯಕ್ಷರುಗಳಾದ ಇರ್ಷಾದ ಭಾಷಾ ಹಾಗೂ ರಾಘವೇಂದ್ರ ದೇಶಪಾಂಡೆ ಸೇರಿಂದತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಕಾರ್ಯದರ್ಶಿ ಕೆಂಪಣ್ಣ ಚಿಂಚಲಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: