RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಚುನಾವಣಾ ಗುರುತಿನ ಚೀಟಿಯ ನೋಂದಣಿಯ ಬಗ್ಗೆ ಜಾಗೃತಿ ಜಾಥಾ

ಗೋಕಾಕ:ಚುನಾವಣಾ ಗುರುತಿನ ಚೀಟಿಯ ನೋಂದಣಿಯ ಬಗ್ಗೆ ಜಾಗೃತಿ ಜಾಥಾ 

ಚುನಾವಣಾ ಗುರುತಿನ ಚೀಟಿಯ ನೋಂದಣಿಯ ಬಗ್ಗೆ ಜಾಗೃತಿ ಜಾಥಾ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 6 :

 

 

ಚುನಾವಣಾ ಸಾಕ್ಷರತಾ ಕ್ಲಬ್ ಇವರ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸೋಮವಾರದಂದು ಹಮ್ಮಿಕೊಂಡ ಚುನಾವಣಾ ಗುರುತಿನ ಚೀಟಿಯ ನೋಂದಣಿಯ ಬಗ್ಗೆ ಜಾಗೃತಿ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಎ.ವಾಯ್.ಹಾದಿಮನಿ, ಶಹರ ಠಾಣೆಯ ಎಎಸ್‍ಐಗಳಾದ ಬಿ.ಜಿ.ಖಿಚಡಿ, ಸಬರದ, ಡಿ.ಎಮ್.ಜಗತಾಪ, ಚುನಾವಣಾ ಸಾಕ್ಷರತಾ ಕ್ಲಬ್‍ದ ಅಧ್ಯಕ್ಷ ಬಿ.ಎಸ್.ಬೆಳಂಕಿಮಠ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಪಿ.ಎನ್.ಕಮತ, ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥೆ ಅನ್ನಪೂರ್ಣಾ ಕುರಬೇಟ, ಉಪನ್ಯಾಸಕರುಗಳಾದ ಆರ್.ವಾಯ್.ಪೂಜೇರಿ, ಬಿ.ಎಸ್.ದಯಣ್ಣವರ, ಎಮ್.ಖಾನಪ್ಪನವರ ಸೇರಿದಂತೆ ಅನೇಕರು ಇದ್ದರು.

Related posts: