RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಜ 1 ರಂದು ಕರವೇ ರಾಜಾಧ್ಯಕ್ಷ ನಾರಾಯಣಗೌಡ ರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ಪ್ರಧಾನ : ಬಸವರಾಜ ಹಿರೇಮಠ

ಗೋಕಾಕ:ಜ 1 ರಂದು ಕರವೇ ರಾಜಾಧ್ಯಕ್ಷ ನಾರಾಯಣಗೌಡ ರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ಪ್ರಧಾನ : ಬಸವರಾಜ ಹಿರೇಮಠ 

ಜ 1 ರಂದು ಕರವೇ ರಾಜಾಧ್ಯಕ್ಷ ನಾರಾಯಣಗೌಡ ರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ಪ್ರಧಾನ : ಬಸವರಾಜ ಹಿರೇಮಠ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 30 :

 

ತಾಲೂಕಿನ ಕಪರಟ್ಟಿ-ಕಳ್ಳಿಗುದ್ದಿ ಶ್ರೀಮಠದ ಪವಾಡ ಪುರುಷ ಶ್ರೀ ಗುರು ಮಹಾದೇವ ಅಜ್ಜನವರ 83ನೇ ಜಯಂತಿ ಹಾಗೂ ನಮಸ್ಕಾರ ಸಾಂಸ್ಕøತಿಕ ಕಲಾ ಸಂಸ್ಥೆ ಇವರ ಆಶ್ರಯದಲ್ಲಿ 16ನೇ ವರ್ಷದ ಕನ್ನಡ ಜಾತ್ರೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿ.1ರಂದು ಸಂಜೆ 5 ಗಂಟೆಗೆ ನಗರದ ಶ್ರೀ ಮುಪ್ಪಯ್ಯನ ಮಠದಲ್ಲಿ ಜರುಗಲಿದೆ.
ಈ ಸಮಾರಂಭದಲ್ಲಿ ಪ್ರತಿವರ್ಷ ನೀಡುವ ಕಾಯಕ ಯೋಗಿ ಪ್ರಶಸ್ತಿಯನ್ನು ಆಂದ್ರ ಪ್ರದೇಶದ ಚರಣಗಿರಿ ಸಂಸ್ಥಾನಮಠದ ಶ್ರೀ ಅಭಿನವ ಮಹಾಂತ ಸ್ವಾಮಿಜಿಯವರಿಗೆ ಹಾಗೂ ಕನ್ನಡ ಜ್ಯೋತಿ ಪ್ರಶಸ್ತಿಯನ್ನು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರಿಗೆ ಪ್ರದಾನ ಮಾಡಲಾಗುವುದು.
ಈ ಸಮಾರಂಭದಲ್ಲಿ ಪೂಜ್ಯರು, ಸಂಸದರು, ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು ಕನ್ನಡಾಭಿಮಾನಿಗಳು, ಭಕ್ತಾಧಿಕಾಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಎಂದು ಕಪರಟ್ಟಿ-ಕಳ್ಳಿಗುದ್ದಿ ಶ್ರೀಮಠದ ಬಸವರಾಜ ಕಪರಟ್ಟಿ ಹಿರೇಮಠ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: