RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ:ನನಗೆ ಮತ ಹಾಕಿದರೆ ಮರಳು ದಂಧೆಗೆ ಅವಕಾಶ : ಮಾರುತಿ ಅಷ್ಟಗಿಯಿಂದ ವಿವಾದಾತ್ಮಕ ಹೇಳಿಕೆ

ಬೆಳಗಾವಿ:ನನಗೆ ಮತ ಹಾಕಿದರೆ ಮರಳು ದಂಧೆಗೆ ಅವಕಾಶ : ಮಾರುತಿ ಅಷ್ಟಗಿಯಿಂದ ವಿವಾದಾತ್ಮಕ ಹೇಳಿಕೆ 

ನನಗೆ ಮತ ಹಾಕಿದರೆ ಮರಳು ದಂಧೆಗೆ ಅವಕಾಶ : ಮಾರುತಿ ಅಷ್ಟಗಿಯಿಂದ ವಿವಾದಾತ್ಮಕ ಹೇಳಿಕೆ

ಬೆಳಗಾವಿ ಎ 11: ಮತದಾರರನ್ನು ಸೆಳೆಯಲು ಮರಳು ದಂಧೆಗೆ ಅವಕಾಶ ನೀಡುವುದಾಗಿ ಯಮಕನಮರಡಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾರುತಿ ಅಷ್ಟಗಿ ಮತದಾರರಿಗೆ ಭರವಸೆ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ.

ಹುಕ್ಕೇರಿ ತಾಲೂಕಿನ ಯಮಕನಮರಡಿ ಎಸ್ ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾರುತಿ ಅಷ್ಟಗಿ ಮರಳು ದಂಧೆ ಪ್ರಾರಂಭಿಸುವುದಾಗಿ ಪ್ರಚಾರದ ವೇಳೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಮತ ಪಡೆಯಲು ಘಟಪ್ರಭಾ ನದಿಯ ಒಡಲು ಕೊರೆಯುವುದಾಗಿ ಭರವಸೆ ನೀಡಿದ್ದಾರೆ. ನನ್ನನ್ನ ಆಯ್ಕೆ ಮಾಡಿದರೆ 24 ಗಂಟೆಗಳಲ್ಲಿ ಮರಳು ದಂಧೆ ಆರಂಭಿಸುತ್ತೇನೆ ಎಂದಿರುವ ವಿಡಿಯೋ ವೈರಲ್ ಆಗಿದೆ.

2013 ರಲ್ಲಿ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಮಾರುತಿ ಅಷ್ಟಗಿ ಸೋತ್ತಿದ್ದರು. ಈ ಬಾರಿ ಮತ್ತೆ ಬಿಜೆಪಿಯಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ವೋಟಿಗಾಗಿ ಮಾರುತಿ ಅಷ್ಟಗಿ ನೀಡಿರುವ ಭರವಸೆ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. 

Related posts: