ಗೋಕಾಕ:ರಮೇಶ್ ಜಾರಕಿಹೊಳಿಗೆ ನೀರಾವರಿ ಮಂತ್ರಿಸ್ಥಾನ ಕೊಟ್ಟರೇ ಬಿಜೆಪಿ ಪಕ್ಷವನ್ನು ನೀರಲ್ಲಿ ಬಿಡುತ್ತಾನೆ : ಲಖನ್ ಜಾರಕಿಹೊಳಿ ಟೀಕೆ

ರಮೇಶ್ ಜಾರಕಿಹೊಳಿಗೆ ನೀರಾವರಿ ಮಂತ್ರಿಸ್ಥಾನ ಕೊಟ್ಟರೇ ಬಿಜೆಪಿ ಪಕ್ಷವನ್ನು ನೀರಲ್ಲಿ ಬಿಡುತ್ತಾನೆ : ಲಖನ್ ಜಾರಕಿಹೊಳಿ ಟೀಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 15:
ರಮೇಶ್ ಜಾರಕಿಹೊಳಿಗೆ ನೀರಾವರಿ ಮಂತ್ರಿಸ್ಥಾನ ಕೊಟ್ಟರೇ ಬಿಜೆಪಿ ಪಕ್ಷವನ್ನು ನೀರಲ್ಲಿ ಬಿಡುತ್ತಾನೆ ಎಂದು ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಟೀಕಿಸಿದರು.
ಅವರು ನಗರದ ತಮ್ಮ ಕಚೇರಿ ಆವರಣದಲ್ಲಿ ಜರುಗಿದ ಕಾಂಗ್ರೇಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ನಾಯಕರಾದ ಸುರೇಶ ಅಂಗಡಿ, ಪ್ರಭಾಕರ ಕೋರೆ, ಶಶಿಕಲಾ ಜೊಲ್ಲೆ ಇವರು ರಮೇಶ್ ಗೆ ಡಿಸಿಎಂ, ನೀರಾವರಿ ಮಂತ್ರಿ,ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡಿದರೇ ಬಿಜೆಪಿ ಪಕ್ಷವನ್ನು ನೀರಲ್ಲಿ ಬಿಡುತ್ತಾನೆ. ಅದಕ್ಕೆ ಆತನಿಗೆ ಪೌರಾಡಳಿತ ಖಾತೆ ಕೊಟ್ಟರೇ ಬಿಜೆಪಿ ಸರ್ಕಾರ ಮೂರುವರೆ ವರ್ಷ ಸುಭದ್ರವಾಗಿರಲು ಸಾಧ್ಯವಾಗುತ್ತದೆ. ಇಲ್ಲದಿದ್ದರೇ ಮತ್ತೇ 6 ತಿಂಗಳಲ್ಲಿ ಎಸ್‍ಸಿ,ಎಸ್‍ಟಿ ಶಾಸಕರನ್ನು ಹಿಡಿದುಕೊಂಡು ಗದ್ದಲ ಎಬ್ಬಿಸುತ್ತಾನೆ. ಆತನ ಸ್ವಭಾವ ನನಗೆ ಗೊತ್ತಿದೆ ಎಂದರು.
ಮಾವ ಅಳಿಯ ಇಬ್ಬರೂ ವಾಮಮಾರ್ಗವಾಗಿ ಹೋಗಿ ಮುಗ್ಧ ಜನರನ್ನು ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ರಮೇಶ ಜಾರಕಿಹೊಳಿ ಆರಿಸಿ ಬಂದಿದ್ದಾರೆ. ನನಗೆ ಯಡಿಯೂರಪ್ಪನವರ ವಿರುದ್ಧ ಸೋಲಾಗಿದೆ. ಮಾವ -ಅಳಿಯನ ವಿರುದ್ಧ ಸೋಲಲ್ಲ ಗೆಲುವು ಆಗಿದೆ. ರಮೇಶ್ ಗೆ 45 ಸಾವಿರ ಮತಗಳು ಅಷ್ಠೇ ಇನ್ನೂಳಿದ 40 ಮತಗಳು ಯಡಿಯೂರಪ್ಪನವರ ನೋಡಿ ಹಾಕಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಾನು ಮತ್ತೇ ಸ್ಪರ್ಧೆ ಮಾಡುವುದು ಖಚಿತ. ಕಳೆದ 4 ತಿಂಗಳಿಂದ ಸತೀಶ ಜಾರಕಿಹೊಳಿ ಅವರು ನನ್ನ ಪರವಾಗಿ ನಿಂತು ಕ್ಷೇತ್ರದ ಜನರ ಸಮಸ್ಯೆಯನ್ನು ಆಲಿಸಿ ನನಗೆ 59 ಸಾವಿರ ಮತಗಳನ್ನು ಪಡೆಯಲು ಸಹಕಾರ ನೀಡಿದ್ದು, ಅಲ್ಲದೇ ನನಗೆ ಮತ ನೀಡಿದ ಕ್ಷೇತ್ರದ ಮತದಾರರಿಗೆ ತುಂಬಾ ಧನ್ಯವಾದಗಳನ್ನು ಲಖನ್ ಜಾರಕಿಹೊಳಿ ಸಲ್ಲಿಸಿದರು. ಕ್ಷೇತ್ರದ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಅವರ ಬೆಂಬಲಕ್ಕೆ ನಾನು ಮತ್ತು ಸತೀಶ ಜಾರಕಿಹೊಳಿ ನಿಲ್ಲುತ್ತೇವೆ. ಪಕ್ಷ ಸಂಘಟನೆಗೆ ಎಲ್ಲರೂ ದುಡಿಯೋಣ ಎಂದರು.
ವೇದಿಕೆ ಮೇಲೆ ಶಾಸಕ,ಮಾಜಿ ಸಚಿವ ಸತೀಶ ಜಾರಕಿಹೊಳಿ, ಮಾರುತ್ತೆಪ್ಪ ನಿರ್ವಾಣಿ, ಪ್ರಕಾಶ ಡಾಂಗೆ, ಜಾಕೀರ ನದಾಫ, ಕೆ.ಎಂ ಗೋಕಾಕ, ರಾಮಣ್ಣಾ ತೋಳಿ, ಶಂಕರ ಗಿಡ್ಡನವರ, ಪರಸಪ್ಪ ಚೂನನ್ನವರ, ಬಸವರಾಜ ಹೊಳೆಯಾಚೆ ಇದ್ದರು. ವಿವೇಕ ಜತ್ತಿ ಸ್ವಾಗತಿಸಿ,ವಂದಿಸಿದರು.