RNI NO. KARKAN/2006/27779|Saturday, April 20, 2024
You are here: Home » breaking news » ಗೋಕಾಕ:ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ ಅವರ ಫೇಸಬುಕ್ ಐಡಿ ಹ್ಯಾಕ್ : ಸೈಬರ್ ಕ್ರೈಂ ಗೆ ದೂರು ದಾಖಲು

ಗೋಕಾಕ:ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ ಅವರ ಫೇಸಬುಕ್ ಐಡಿ ಹ್ಯಾಕ್ : ಸೈಬರ್ ಕ್ರೈಂ ಗೆ ದೂರು ದಾಖಲು 

ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ ಅವರ ಫೇಸಬುಕ್ ಐಡಿ ಹ್ಯಾಕ್ : ಸೈಬರ್ ಕ್ರೈಂ ಗೆ ದೂರು ದಾಖಲು

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 30 :

 

 

ರಾಜ್ಯದ ನಾನಾ ಕಡೆಗಳಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಇತರ ಸರಕಾರಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸಬುಕ್ ಖಾತೆ ತೆರೆದು ವಂಚನೆ ಮಾಡುವ ಜಾಲ ವ್ಯವಸ್ಥಿತವಾಗಿರುವಂತೆಯೇ ಗೋಕಾಕದಲ್ಲಿಯೂ ಅಂತಹದ್ದೊಂದು ಸೈಬರ್ ಕ್ರೈಂ ನಡೆದಿದೆ.

ಗೋಕಾಕ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ ಅವರ ಹೆಸರು ಹಾಗೂ ಫೋಟೋ ಬಳಸಿ ದುಷ್ಕರ್ಮಿಗಳು ನಕಲಿ‌ ಫೇಸ್‌ಬುಕ್ ಖಾತೆ ತೆರೆದಿದ್ದಾರೆ. ಈ ಖಾತೆ ಕಳೆದ ಮಂಗಳವಾರವಷ್ಷೇ ತೆರೆಯಲಾಗಿದೆ. ಖಾತೆ ತೆರೆದ ನಾಲ್ಕೆದು ತಾಸಿನಲ್ಲೇ ದುಷ್ಕರ್ಮಿಗಳ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಬಳಗಾರ ಜಿ.ಬಿ ಹೆಸರಲ್ಲಿ ಫೇಕ್ ಐಡಿ ಸೃಷ್ಪಿಸಿರುವ ಹ್ಯಾಕರಗಳು ಶಿಕ್ಷಣಾಧಿಕಾರಿಗಳ ಅಸಲಿ ಫೇಸಬುಕ ನಲ್ಲಿರುವ ಸ್ನೇಹಿತರಿಗೆ ಪ್ರೆಂಡ್ರ ರಿಕ್ವೇಸ್ಟ ಕಳುಹಿಸಿದ್ದಾರೆ. ಬಿಇಒ ಬಳಗಾರ ಅವರ ಫೋಟೋ ಇವರು ಮತ್ತು ಅವರ ಹೆಸರಿನಲ್ಲಿ ಬಂದ ಪ್ರೆಂಡ್ ರಿಕ್ವೇಸ್ಟನ್ನು ಎಕ್ಸೇಪ್ಟ ಮಾಡಿರವ ಸ್ನೇಹಿತರಿಗೆ ಐಡಿ ಹ್ಯಾಕ ಮಾಡಿದವರು ಫೇಸಬುಕ್ ಮೆಸೆಂಜರನಲ್ಲಿ ಮೆಸೇಜ್ ಹಾಕಿ ಆನಾರೋಗ್ಯದ ಕಾರಣ ಸಂಬಂಧಿಕರೊಬ್ಬರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಅವರು ಐಸಿಯುನಲ್ಲಿದ್ದಾರೆ ತಕ್ಷಣದಲ್ಲಿ ಹಣ ಬೇಕಾಗಿದೆ ಎಂದು ಹೇಳಿ ಶಿಕ್ಷಣಾಧಿಕಾರಿಗಳ ಸ್ನೇಹಿತರೊಬ್ಬರಿಂದ 18′ 500 ರೂಗಳನ್ನು ಪೋನ ಪೇ ಮುಖಾಂತರ ವರ್ಗಾವಣೆ ಮಾಡಿಕೊಂಡಿದ್ದಾರೆ. ಇನ್ನೂ ಹಲವರಿಗೆ ಈ ರೀತಿ ಮೆಸೇಜ್ ಮಾಡಿರುವ ದೃಷ್ಕರ್ಮಿಗಳು ಅವರಿಗೂ ಸಹ ಇದೇ ರೀತಿ ಮೆಸೇಜ್ ಕಳುಹಿಸಿ ಕೊಟ್ಟಿದ್ದಾರೆ. ಅದರಲ್ಲಿ ಕೆಲವರು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರಿಗೆ ಪೋನ ಮಾಡಿ ನಿಮ್ಮ ಪೇಸಬುಕ್ಕ ನಿಂದ ಈ ರೀತಿಯ ಮೆಸೇಜಗಳು ಬಂದಿವೆ ಇದು ಸರಿನಾ ಎಂದು ಪ್ರಶ್ನಿಸಿದಾಗ ಫೇಸಬುಕ್ ಐಡಿ ಹ್ಯಾಕ ಆಗಿರುವ ವಿಷಯ ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಶಿಕ್ಷಣಾಧಿಕಾರಿ ಅವರು ತಮ್ಮೆಲ್ಲ ಫೇಸಬುಕ ಪ್ರೆಂಡ್ಸಗಳಿಗೆ ಪೋನ್ ಮಾಡಿ ನನ್ನ ಪೇಸಬುಕ ಐಡಿ ಬಳಸಿ ದುಷ್ಕರ್ಮಿಗಳು ಹಣ ಕೇಳುತ್ತಿದ್ದಾರೆ ಯಾರು ನನ್ನ ಫೇಸಬುಕ್ ನಲ್ಲಿ ಹಣ ವರ್ಗಾವಣೆ ಮಾಡಿ ಎಂದು ಮೆಸೇಜ್ ಮಾಡಿದರೆ ಹಣ ವರ್ಗಾವಣೆ ಮಾಡಬೇಡಿ ಎಂದು ವಿನಂತಿಸಿಕೊಂಡು ಬೆಳಗಾವಿಯ ಸೈಬರ್ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಹ್ಯಾಕರಗಳು ಶಿಕ್ಷಣ ಇಲಾಖೆಯ ಜಗದೀಶ ಮಠಪತಿ, ಎಂ.ಬಿ ಮುತ್ನನಾಳ, ಮಹಾಂತೇಶ ಕರುಬೇಟ, ಕಿಚಡಿ, ಗಿರೀಶ ಉಪ್ಪಾರ , ಶಿಕ್ಷಕರುಗಳು ಫೇಕ್ ಫೇಸಬುಕ ಐಡಿಗಳನ್ನು ಮಾಡಿ ಇದೆ ರೀತಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕಣಗಳು ಬೆಳಕಿಗೆ ಬಂದಿವೆ.

ಮೋಸ ಮಾಡುವವರು ಪೋಟೋ ಮತ್ತು ಹೆಸರು ಬಳಸಿ ಅವರದ್ದೆ ಫೆಕ್ ಮೊಬೈಲ್ ನಂ ರಿಂದ ಫೇಸಬುಕ ಐಡಿ ಮಾಡುತ್ತಾರೆ. ಫೇಸಬುಕದಲ್ಲಿರುವ ಗೆಳೆಯರನ್ನು ಆಯ್ಕೆಮಾಡಿಕೊಂಡು ಪ್ರೆಂಡ್ ರಿಕ್ವೇಸ್ಟ ಕಳುಹಿಸಿ , ಫೇಸಬುಕ ಮೇಸೆಜಂರದಲ್ಲಿ ಚಾಟ ಮಾಡಿ , ಆಕಸ್ಮಿಕ ದುಡ್ಡಿಗೆ ಡಿಮಾಂಡ್ಶ ಮಾಡುತ್ತಾರೆ. ಆರೋಗ್ಯ ಕಾರಣ ಹೇಳಿ ಕಡಿಮೆ ಹಣ ಕೇಳುತ್ತಾರೆ. ಪೋನ ಪೇ ಗೂಗಲ್ ಫೇ , ಇದೆಯಾ ಎಂದು ಕೇಳಿ ಪೋನ್ ಪೇ ಮತ್ತು ಗೂಗಲ್ ಪೇ ಗೆ ಹಣ ವರ್ಗಾವಣೆ ಮಾಡಿ ಎಂದು ಹೇಳಿ ತಮ್ಮ ಅಕೌಂಟ್ ನಲ್ಲಿರುವ ಎಲ್ಲಾ ಹಣ ಖಾಲಿ ಮಾಡುವ ದುಷ್ಕೃತ್ಯಕ್ಕೆ ಕೈ ಹಾಕಿರುವ ಹ್ಯಾಕರಗಳು ವ್ಯವಸ್ಥಿತವಾಗಿ ಹಣ ದೋಚುವ ಕಾರ್ಯಕ್ಕೆ ಮುಂದಾಗಿ ಹಲವಾರು ಅಮಾಯಕರಿಂದ ಹಣ ಸೂಲಿಗೆ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ.

ಎಚ್ಚರಿಕೆ ಕ್ರಮ : ಹಾಗೇನಾದರು ತಮ್ಮ ಪೇಸಬುಕ್ಕ ಐಡಿಯಿಂದ ಬಳಸಿ ತಮ್ಮ ಗೆಳೆಯರಿಗೆ ಆನಲೈನ್ ಮುಖಾಂತರ ಹಣ ಕಳುಹಿಸಿ ಎಂದು ಫೇಸಬುಕ ಮೆಸೆಂಜರ್ ನಲ್ಲಿ ಚಾಟ ಮಾಡಿ ಹಣ ಕೇಳಿದರೆ ಯಾರು ಕೂಡಿ ದುಡ್ಡು ಹಾಕದೆ ಯಾರ ಐಡಿಯಿಂದ ಮೆಸೆಜ್ ಬಂದಿದೆ ಅವರಿಗೆ ಖುದ್ದಾಗಿ ಮಾತನಾಡಿ ವಿಷಯದ ಬಗ್ಗೆ ಖಚಿತ ಪಡೆಸಿಕೊಳ್ಳಿ . ‌ ಈಗಾಗಲೇ ಫೇಸ್ಬುಕ್ ಪ್ರೇಂಡ್ ಇದ್ದವರು ಪ್ರೆಂಡ್ಸ್ ರಿಕ್ವೇಸ್ಟ ಕಳುಹಿಸದರೆ ಅಂತಹ ಗೆಳೆಯರಿಗೆ ಈ ವಿಷಯವನ್ನು ಗಮನಿಗೆ ತಂದು ತಕ್ಷಣ ಸಮಿಪದ ಸೈಬರ್ ಕ್ರೈಂ ವಿಭಾಗದವರನ್ನು ಭೇಟಿಯಾಗಿ ದೂರು ದಾಖಲಿಸಿ ‌.

” ಫೇಸಬುಕ್ ನಲ್ಲಿ ಈಗಾಗಲೇ ಪ್ರೆಂಡ್ಸ ಆಗಿರುವವರ ಐಡಿಯಿಂದ ಮತ್ತೊಮ್ಮೆ ಪ್ರೆಂಡ್ಸ ರಿಕ್ವೇಸ್ಟ ಬಂದರೆ ತಕ್ಷಣ ಅವರಿಗೆ ಪೋನ ಮಾಡಿ ಅದನ್ನು ಖಚಿತ ಪಡೆಸಿಕೊಂಡು ಎಕ್ಸೆಫೇಕ್ಟ ಮಾಡಬೇಕು. ಆನಲೈನ್ ಗೂಗಲ್ ಪೇ , ಪೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿ ಅಂತ ಹೇಳಿದರೆ ಎಷ್ಟೇ ಪರಿಚಯಸ್ಥರಿದ್ದರು ಸಹ ಹಣ ವರ್ಗಾವಣೆ ಮಾಡಬೇಡಿ ತಕ್ಷಣ ಅವರ ಗಮನಕ್ಕೆ ತಂದು ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿ ಎಂದು ಫೇಸಬುಕ ಐಡಿ ಹ್ಯಾಕಗೆ ಒಳಗಾದ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ವಿನಂತಿಸಿದ್ದಾರೆ.

Related posts: