ಗೋಕಾಕ:ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ : ಕಾಂಗ್ರೆಸ್ ಮುಖಂಡ ಅಶೋಕ ಬೇಸರ

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ : ಕಾಂಗ್ರೆಸ್ ಮುಖಂಡ ಅಶೋಕ ಬೇಸರ
ಗೋಕಾಕ ಡಿ 6 : ಬೆಳಗಾವಿ ಜಿಲ್ಲೆಯ ವಿಸ್ತೀರ್ಣತೆ ನೋಡಿದರೆ 4 ಹೊಸ ಜಿಲ್ಲೆ ನಿರ್ಮಾಣ ಆಗಬೇಕು ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಬೇಸರ ವ್ಯಕ್ತಪಡಿಸಿದರು.
ಬುಧವಾರದಂದು ನಗರದ ಅವರ ಗೃಹ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನೀಡಿದ ಹೇಳಿಕೆಯ ಪೂರಕವಾಗಿ ಅವರು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸದನ ನಡೆಯುತ್ತಿರುವ ಸಂಧರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಗೋಕಾಕ ನೂತನ ಜಿಲ್ಲಾ ರಚನೆಗೆ ಚಾಲನೆ ನೀಡಬೇಕು. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗೋಕಾಕ ನೂತನ ಜಿಲ್ಲಾ ರಚನೆಗೆ ಕೊನೆಯ ಆಗಬೇಕು ಆ ನಿಟ್ಟಿನಲ್ಲಿ ಎಲ್ಲಾ ಹೋರಾಟಗಾರರು, ಗೋಕಾಕ ಜಿಲ್ಲಾ ಚಾಲನಾ ಸಮಿತಿ ಮತ್ತು ವಕೀಲರ ಸಂಘದವರು ಮುಂದಾಳತ್ವ ತಗೆದುಕೊಂಡು ಹೋರಾಟವನ್ನು ತೀವ್ರ ಗೋಳಿಸಬೇಕು ಎಂದು ಒತ್ತಾಯಿಸಿದರು. ಗೋಕಾಕ ಜಿಲ್ಲಾ ಹೋರಾಟ ಇಂದು ನಿನ್ನೆಯದಲ್ಲ ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದು ಈ ಹೋರಾಟ ಪಾಕ್ಷಾತೀತವಾಗಿ ನಡೆದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದ ಅವರು ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಹೋರಾಟ ಮಾಡಿದರೆ ಸರಕಾರದ ಕಣ್ಣತೆರೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಸಚಿವ ಸತೀಶ ಜಾರಕಿಹೊಳಿ ,ಶಾಸಕರುಗಳಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರು ಸಹ ಇದರ ಬಗ್ಗೆ ಕಾಳಜಿ ವಹಿಸಿ ಎಲ್ಲಾ ಹೋರಾಟಗಾರರ ನಿಯೋಗವನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ಬೇಟಿಮಾಡಿಸಿ ಗೋಕಾಕ ನೂತನ ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜನಪರ ಹೋರಾಟಗಾರ ದಸ್ತಗಿರಿ ಪೈಲವಾನ, ಲಕ್ಷ್ಮಣ ಕರಮೋಸಿ, ನಿಂಗಪ್ಪ ಅಮ್ಮಿನಬಾಂವಿ, ಸದಾಕತ ಮಕಾಂದಾರ ಉಪಸ್ಥಿತರಿದ್ದರು.