RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಜೆ.ಜಿ.ಸಹಕಾರಿ ಆಸ್ಪತ್ರೆಯ ಆರ್ಯುವೇದಿಕ ಆಸ್ಪತ್ರೆ ರಾಜ್ಯದಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ : ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು

ಗೋಕಾಕ:ಜೆ.ಜಿ.ಸಹಕಾರಿ ಆಸ್ಪತ್ರೆಯ ಆರ್ಯುವೇದಿಕ ಆಸ್ಪತ್ರೆ ರಾಜ್ಯದಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ : ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು 

ಜೆ.ಜಿ.ಸಹಕಾರಿ ಆಸ್ಪತ್ರೆಯ ಆರ್ಯುವೇದಿಕ ಆಸ್ಪತ್ರೆ ರಾಜ್ಯದಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ : ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಡಿ 3 :

 

ಕಳೆದ ಮೂರು ದಿನಗಳಿಂದ ಜೆ.ಜಿ.ಸಹಕಾರಿ ಆಸ್ಪತ್ರೆಯ ಸಹಕಾರಿ ಮಹರ್ಷಿ ಬಿ.ಎ.ಪಾಟೀಲ ಆರ್ಯುವೇದಿಕ ಆಸ್ಪತ್ರೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ಗುದಗತ ರೋಗಗಳ ವಿಚಾರ ಸಂಕಿರ್ಣ ಯಶಸ್ವಿಯಾಗಿ ಸೋಮವಾರ ಮುಕ್ತಯವಾಯಿತು.
ಕಾರ್ಯಕ್ರಮ ಸಾನಿದ್ಯವಹಿಸಿದ ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಮತನಾಡಿ ಇಂದು ಸಹಕಾರಿ ಸಂಘದಲ್ಲಿ ನಡೆದ ಎಷ್ಟೋ ಸಂಸ್ಥೆಗಳು ನಷ್ಟದಿಂದ ಮುಚ್ಚಿ ಹೋಗುತ್ತಿವೆ. ಆದರೆ ಪ್ರಪ್ರಥಮವಾಗಿ ಸಹಕಾರಿ ಸಂಘದ ಅಡಿಯಲ್ಲಿ ಸ್ಥಾಪನೆಗೊಂಡ ಏಕೈಕ ಆರೋಗ್ಯ ಕೇಂದ್ರವಾಗಿರುವ ಜೆ.ಜಿ.ಸಹಕಾರಿ ಆಸ್ಪತ್ರೆಯ ಆರ್ಯುವೇದಿಕ ಆಸ್ಪತ್ರೆ ಇಂದು ರಾಜ್ಯದಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡು ರಾಜೀವಗಾಂಧಿ ವಿಶ್ವವಿದ್ಯಾನಿಲಯದ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿರುವುದು ಸಂತೋಷದ ವಿಚಾರ ಇದಕ್ಕೆ ಮುಖ್ಯ ಕಾರಣ ಇಲ್ಲಿನ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ರಾಜೀವಗಾಂಧಿ ವಿಶ್ವವಿದ್ಯಾನಿಲಯದ ರಿಜಿಸ್ಟರ್ ಆಗಿರುವ ಡಾ|| ಕೆ.ಬಿ.ಲಿಂಗೇಗೌಡ ಮಾತನಾಡಿ ರಾಜ್ಯದಲ್ಲಿ ಎಲ್ಲಾ ಸವಲತ್ತುಗಳನ್ನು ಹೊಂದಿರುವ ಏಕೈಕ ಆರ್ಯುವೇದಿಕ ಆಸ್ಪತ್ರೆ ಇದಾಗಿದ್ದು ಮುಂದಿನ ದಿನದಲ್ಲಿ ಜೆ.ಜಿ.ಸಂಸ್ಥೆಯವರು ಮೆಡಿಕಲ್ ಆಸ್ಪತ್ರೆಯನ್ನು ಸಹ ಈ ಸ್ಥಳದಲ್ಲಿ ಮಾಡಬಹುವುದಾಗಿದೆಂದು ಹೇಳಿದರು.
ಆಯುಷ್ ವಿಭಾಗದ ಕಮೀಷನರ್ ಐಎಫ್‍ಎಸ್ ಅಧಿಕಾರಿ ಮಿನಿಕಾಶಿ ನೇಗಿ ಹಾಗೂ ಐಟಿಬಿಪಿ ಡಿಐಜಿ ಬೆಳಗಾವಿಯ ಹರೇಂದ್ರಪಾಲ್ ಸಿಂಗ್ ಮಾತನಾಡಿದರು. ಡಾ|| ಬಿ.ಕೆ.ಎಚ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನ ಬಿ.ಆರ್.ಪಾಟೀಲ ವಹಿಸಿದರು. ವೇದಿಕೆಯಲ್ಲಿ ಜೆ.ಜಿ.ಸಹಕಾರಿ ಸಂಸ್ಥೆಯ ಎಲ್ಲಾ ನಿರ್ದೇಶಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಜೆ.ಜಿ.ಸಹಕಾರಿ ಆರ್ಯುವೇದಿಕ ಕಾಲೆಜಿನ ಎಲ್ಲಾ ಪ್ರಾಚಾರ್ಯರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಪ್ರಥಮವಾಗಿ ರಾಷ್ಟ್ರಮಟ್ಟದಲ್ಲಿ ನಡೆದ ಗುದಗತ ರೋಗಗಳಾದ ಮೂಲವ್ಯಾಧಿ, ಭಗಂದರ, ಫಿಶ್ಯಾರ ರೋಗಗಳ ಬಗ್ಗೆ 20ಕ್ಕೂ ಹೆಚ್ಚು ರೋಗಿಗಳಿಗೆ ವಿವಿಧ ರೀತಿಯ ಚಿಕಿತ್ಸಾ ವಿಧಾನಗಳಾದ ಲೇಸರ, ಬ್ಯಾಡಿಂಗ್, ಕ್ಷಾರಸೂತ್ರ, ಕ್ಷಾರಪತನ, ಆರ್.ಐ.ಸಿ ಹಾಗೂ ಇತರ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತೆ ಹಾಗೂ ವಿಚಾರ ಸಂಕೀರ್ಣದಲ್ಲಿ ದೇಶದ 9 ರಾಜ್ಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ಮಾಹಿತಿಯನ್ನು ಪಡೆದುಕೊಂಡರು.

Related posts: