RNI NO. KARKAN/2006/27779|Monday, September 28, 2026
You are here: Home » breaking news » ಘಟಪ್ರಭಾ:ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ

ಘಟಪ್ರಭಾ:ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ 

ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ
ಘಟಪ್ರಭಾ ಅ 1: ಸಮೀಪದ ಪಾಮಲದಿನ್ನಿ ಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರವ್ವಾ ರಂಗಪ್ಪಾ ಸಂಪಗಾರ ಹಾಗೂ ಉಪಾಧ್ಯಕ್ಷರಾಗಿ ರೇವಪ್ಪಾ ಸಿದ್ಧಪ್ಪಾ ಡಬಾಜ ಆಯ್ಕೆಯಾದರು.

ಕಳೆದ ಕೆಲ ದಿನಗಳ ಹಿಂದೆ ಅಧ್ಯಕ್ಷೆ ಗಂಗವ್ವಾ ಲಕ್ಷ್ಮಣ ಡಬಾಜ ಹಾಗೂ ಉಪಾಧ್ಯಕ್ಷ ವಿಠ್ಠಲ ಈರಪ್ಪಾ ಭಂಗಿ ಅವರು ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ತೆರುವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಈ ಆಯ್ಕೆ ನಡೆಯಿತು.

ಚುನಾವಣೆ ಅಧಿಕಾರಿಯಾಗಿ ಭೂಸೇನಾ ನಿಗಮದ ಅಧಿಕಾರಿ ಝಡ್.ಎಮ್.ಚಿಂಚೂಳ್ಳಕರ ಅವರು ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ಕಾಂತು ಯತ್ತಿನಮನಿ, ಸುಧೀರ ಜೋಡಟ್ಟಿ, ಗ್ರಾ.ಪಂ ಸರ್ವ ಸದಸ್ಯರು, ಗ್ರಾಮದ ಹಿರಿಯರು, ಪಿಡಿಓ ಕು.ಅನುರಾಧಾ ಭಜಂತ್ರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related posts: