RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ರಮೇಶ ಜಾರಕಿಹೊಳಿ ಉಪ ಮುಖ್ಯಮಂತ್ರಿಯಾಗಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಲಿದ್ದಾರೆ : ಮಾಜಿ ಸಚಿವ ಚಿಂಚನಸೂರ ವಿಶ್ವಾಸ

ಗೋಕಾಕ:ರಮೇಶ ಜಾರಕಿಹೊಳಿ ಉಪ ಮುಖ್ಯಮಂತ್ರಿಯಾಗಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಲಿದ್ದಾರೆ : ಮಾಜಿ ಸಚಿವ ಚಿಂಚನಸೂರ ವಿಶ್ವಾಸ 

ರಮೇಶ ಜಾರಕಿಹೊಳಿ ಉಪ ಮುಖ್ಯಮಂತ್ರಿಯಾಗಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಲಿದ್ದಾರೆ : ಮಾಜಿ ಸಚಿವ ಚಿಂಚನಸೂರ ವಿಶ್ವಾಸ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 25 :

 

ಗೋಕಾಕ ನ 25 : ಡಿ 9 ರಂದು ಚುನಾವಣಾ ಫಲಿತಾಂಶ ಬಂದ ನಂತರ ರಮೇಶ ಜಾರಕಿಹೊಳಿ ಅವರು ಈ ರಾಜ್ಯದ ಉಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಮಾಜಿ ಸಚಿವ ಅಂಬಿಗೇರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು

ಸೋಮವಾರದಂದು ನಗರದ ಖಾಸಗಿ ಹೊಟೇಲ ಒಂದರಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಪ್ರಬಲ ನಾಯಕರಾಗಿರುವ ರಮೇಶ ಜಾರಕಿಹೊಳಿ ರಾಜ್ಯದ ಉಪ ಮುಖ್ಯಮಂತ್ರಿ ಆಗುವ ಕಾಲ ಕೂಡಿ ಬಂದಿದೆ. ಸಿಎಂ ಯಡಿಯೂರಪ್ಪ ಅವರು 3 ವರ್ಷ ಮುಖ್ಯಮಂತ್ರಿಯಾಗಿ ಮುಂದೆ ವರೆಯುತ್ತಾರೆ .ಎಲ್ಲರೂ ಒಂದಾಗಿ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿದರೆ ಮುಂದೆ ಅವರು ಅಭಿವೃದ್ಧಿಯ ಹೊಳೆಯನ್ನೇ ಹರಿಸಲಿದ್ದಾರೆ .

ಕೇಂದ್ರದಲ್ಲಿ ಮೋದಿ ರಾಜ್ಯದಲ್ಲಿ ಯಡಿಯೂರಪ್ಪ ಜನ ಮೆಚ್ಚುವ ಕಾರ್ಯ ಮಾಡುತ್ತಿದ್ದಾರೆ. ರಾಜ ಮಹಾರಾಜರು ಕಲ್ಲಿನ ಕೊಟೆ ಕಟ್ಟಿದ್ದರೆ ಯಡಿಯೂರಪ್ಪ ಅಭಿವೃದ್ಧಿಯ ಕೊಟ್ಟೆಯನ್ನೇ ಕಟ್ಟುತ್ತಿದ್ದಾರೆ. ಮಿನುಗುವ ನಕ್ಷತ್ರ ರಾಜಕೀಯದ ಮಹಾನ ಮುತ್ಸದ್ದಿ ನಾಯಕ ಮೋದಿ ವಿಶ್ವ ಮೆಚ್ಚುವಂತಹ ಕಾರ್ಯಮಾಡುತ್ತಿದ್ದಾರೆ ಅವರ ಕಾರ್ಯ ಮೆಚ್ಚಿ ಅಮೆರಿಕ ಅಧ್ಯಕ್ಷ ಟ್ರಂಫ್ ಮೋದಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ ಎಂದು ಹೇಳಿದ ಅವರು ಕಾಂಗ್ರೆಸ್ ಪಕ್ಷ ಹಿನಾಯ ಸ್ಥಿತಿಯಲ್ಲಿದೆ , ಸಿದ್ದರಾಮಯ್ಯ ಶಕ್ತಿ ಕುಂದಿದ್ದೆ . ಕಾಂಗ್ರೆಸ್ ಮುಖಂಡರು ಹರಿಪ್ರಸಾದ , ಮಲ್ಲಿಕಾರ್ಜುನ ಖರ್ಗೆ , ವೀರಪ್ಪ ಮೋಹ್ಲಿ ಸೇರಿದಂತೆ ಇತರ ನಾಯಕರು ಸಹಕರಿಸುತ್ತಿಲ್ಲಾ , ಕಾಂಗ್ರೆಸ್ ಸೋತ್ತು ಸುಣ್ಣವಾಗಿ ನೆಲ ಕಚ್ಚಿದೆ 20 ವರ್ಷ ಕಾಂಗ್ರೆಸ್ ಎದ್ದು ಬರುವದಿಲ್ಲ .ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಪರಿಸ್ಥಿತಿ ಹಾವು ಮುಂಗಸಿಯಂತಾಗಿದೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಗಳ ತಾರಕಕ್ಕೆ ಏರಿದೆ ಉಪ ಚುನಾವಣೆ ನಂತರ .ದಳ ಛೀದ್ರ ಛೀದ್ರವಾಗುತ್ತದೆ ಕಾಂಗ್ರೆಸ್ ಒಡೆದ ಮನೆಯಾಗಿದೆ ಈಗ ಬರೀ ಯಡಿಯೂರಪ್ಪ ಮತ್ತು ರಮೆಶ ಜಾರಕಿಹೊಳಿ ಕುದುರೆ ಓಡುತ್ತಿದೆ ಪ್ರಧಾನಿ ಮೋದಿ ಸುನಾಮಿ ಯಡಿಯೂರಪ್ಪ ಅಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿಯ ಸುಂಟರಗಾಳಿಗೆ ಕೋಚ್ಚಿ ಹೋಗಿದೆ . ಸ್ವತಂತ್ರ ಸಿಕ್ಕು 70 ವರ್ಷವಾದರೂ ಸಹ ಕಾಂಗ್ರೆಸ್ ನವರು ಗಂಗಾ ಮಾತಾ ಸಮಾಜದರನ್ನು ಗುರುತಿಸಿಲ್ಲಿ ಆದರೆ ಪ್ರಧಾನಿ ಮೋದಿ ಗುರುತಿಸಿ ಗಂಗಾಮಾತ ಸಮಾಜದ ರಾಮನಾಥ್ ಕೋವಿಂದು ಅವರನ್ನು ರಾಷ್ಟ್ರಪತಿ ಮತ್ತು ಸ್ವಾಧಿ ಅವರನ್ನು , ಕೇಂದ್ರ ಮಂತ್ರಿ ಮತ್ತು ಬಾಬು ಚಿಂಚನಸೂರ ಅವರನ್ನು ಅಂಬಿಗೇರ ಚೌಡಯ್ಯ ನಿಗಮದ ಅಧ್ಯಕ್ಷ ರನ್ನಾಗಿ ಮಾಡಿದ್ದಾರೆ. ಇದರಿಂದ ಗಂಗಾ ಮಾತ ಸಮಾಜಕ್ಕೆ ಹೊಸ ಯುಗ ಪ್ರಾರಂಭವಾಗಿದೆ ಗೋಕಾಕ ಗಂಗಾಮಾತ ಸಮಾಜದ ಅಂಬಿಗೇರ , ತಳವಾರ , ಸುಣಗಾರ ಸಮಾಜ ಬಾಂಧವರು ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದಂತೆ ಗೋಕಾಕ ಗಂಗಾಮಾತ ಸಮಾಜದವರು ಈ ಉಪ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ಅತ್ಯಂತ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಬೇಕೆಂದ ಚಿಂಚನಸೂರ ಅವರು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಮುದುಕಪ್ಪ ತಳವಾರ ,ಕೃಷ್ಣಾ ನಾಶಿ , ಹನುಮಂತ ಕಾಳಮ್ಮನಗುಡಿ , ಲಕ್ಷ್ಮಣ ಯಮಕನಮರಡಿ, ಬಸವರಾಜ ಮುತ್ಯಾಗೋಳ ಸೇರಿದಂತೆ ಇತರರು ಇದ್ಧರು

Related posts: