RNI NO. KARKAN/2006/27779|Saturday, June 15, 2024
You are here: Home » breaking news » ಘಟಪ್ರಭಾ :ದುಪದಾಳ ಜಲಾಶಯದಲ್ಲಿ ಮುಳುಗಿ 4 ಯುವಕರ ದುರ್ಮರಣ

ಘಟಪ್ರಭಾ :ದುಪದಾಳ ಜಲಾಶಯದಲ್ಲಿ ಮುಳುಗಿ 4 ಯುವಕರ ದುರ್ಮರಣ 

ದುಪದಾಳ ಜಲಾಶಯದಲ್ಲಿ ಮುಳುಗಿ 4 ಯುವಕರ ದುರ್ಮರಣ
ಘಟಪ್ರಭಾ ಏ 14 : ಅಂಬೇಡ್ಕರ ಜಯಂತಿ ರಜೆ ಹಿನ್ನಲೆಯಲ್ಲಿ ಧೂಪದಾಳ ಡ್ಯಾಂ ಗೆ ಈಜಲೂ ಹೋಗಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ದುಪದಾಳ ಗ್ರಾಮದಲ್ಲಿ ಜರುಗಿದೆ.
ಸಂತೋಷ ಬಾಬು ಇಡಗೆ. ವಯಾ: 16, ಅಜಯ ಬಾಬು ಜೋರೆ. ವಯಾ: 17, ಕೃಷ್ಣ ಬಾಬು ಜೋರೆ, ವಯಾ 17, ಆನಂದ ವಿಷ್ಣು ಕೋಕರೆ, ವಯಾ: 16 ಮೃತದುರ್ಧೈವರಾಗಿದ್ದು,
ವಿಠಲ ಜಾನು ಕೋಕರೆ ವಯಾ 18 ಮತ್ತು ರಾಮಚಂದ್ರ ವಿಷ್ಣು ಕೋಕರೆ ಅವರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಘಟಪ್ರಭಾ ಪುರಸಭೆ ವ್ಯಾಪ್ತಿಯ ಮನಿಷಬಾರನ ಆರು ಜನ ಕೆಲಸದ ಹುಡುಗರು ಡ್ಯಾಂನಲ್ಲಿ ಈಜಲು ಹೋಗಿದ್ದರು . ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: