ಗೋಕಾಕ:ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಬಿ.ಟಿ.ಪುಂಜಿ
ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು : ಬಿ.ಟಿ.ಪುಂಜಿ
ಬೆಟಗೇರಿ ಅ 2 : ಶಾಲೆಯ ಶಿಕ್ಷಕರು, ಪಾಲಕರು ಮಕ್ಕಳಲ್ಲಿ ಹುದಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲೆಯಲ್ಲಿ ಆಯೋಜಿಸುವ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಂಡು ತಮ್ಮಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಹೂರಸೂಸಬೇಕೆಂದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಸಿಆರ್‍ಸಿ ಅಧಿಕಾರಿ ಬಿ.ಟಿ.ಪುಂಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಗುರುವಾರ ಆ.2ರಂದು ಆಯೋಜಿಸಿದ ಬೆಟಗೇರಿ ಸಿಆರ್‍ಸಿ ವ್ಯಾಪ್ತಿಯ ಎಲ್ಲ ಪ್ರೌಢ ಹಾಗೂ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸ್ಥಳೀಯ ಈರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು.
ಬೆಟಗೇರಿ ಸಿಆರ್‍ಸಿ ವ್ಯಾಪ್ತಿಯ ಎಲ್ಲ ಪ್ರೌಢ ಹಾಗೂ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಹಲವಾರು ಮನರಂಜನೆ, ಸಾಂಸ್ಕøತಿಕ, ರಸಪ್ರಶ್ನೆ ಕಾರ್ಯಕ್ರಮ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳು ನಡೆದವು. ಗ್ರಾಮದ ಗಣ್ಯರನ್ನು, ಅತಿಥಿ ಮಹೋದಯರನ್ನು, ಸಾಧಕ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಬೆಟಗೇರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ, ಬಿಲಕುಂದಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಟಿ.ಕೆ.ಟಕಳಿ, ಎಸ್.ವೈ.ಪಾಟೀಲ, ಎ.ಎಮ್.ನಗಾರ್ಶಿ, ಎಮ್.ಬಿ.ಕಳ್ಳಿಗುದ್ಧಿ, ಇಲ್ಲಿಯ ಉಭಯ ಪ್ರಾಥಮಿಕ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷರಾದ ರಾಮಣ್ಣ ನೀಲಣ್ಣವರ, ಉದ್ದಪ್ಪ ಚಂದರಗಿ, ಮಲ್ಲಪ್ಪ ಪಣದಿ ಸೇರಿದಂತೆ ಬೆಟಗೇರಿ ಸಿಆರ್‍ಸಿ ವ್ಯಾಪ್ತಿಯ ಎಲ್ಲ ಪ್ರೌಢ ಹಾಗೂ ಪ್ರಾಥಮಿಕ ಕನ್ನಡ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣಪ್ರೇಮಿಗಳು, ಇತರರು ಇದ್ದರು.
ಸ್ಥಳೀಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಬೆಟಗೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್.ಬಿ.ಸನದಿ ಕೊನೆಗೆ ವಂದಿಸಿದರು.