ಗೋಕಾಕ:ಅಶೋಕ ಪೂಜಾರಿ v/s ಜಾರಕಿಹೊಳಿ ಸ್ವರ್ಧೆ : ಜೆಡಿಎಸ್ ಅಭ್ಯರ್ಥಿ ಅಶೋಕ

ಅಶೋಕ ಪೂಜಾರಿ v/s ಜಾರಕಿಹೊಳಿ ಸ್ವರ್ಧೆ : ಜೆಡಿಎಸ್ ಅಭ್ಯರ್ಥಿ ಅಶೋಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 21 :
ಗೋಕಾಕ ಉಪ ಚುನಾವಣೆ ತ್ರಿಕೋನ ಸ್ವರ್ಧೆ ಅಲ್ಲ ಅಶೋಕ ಪೂಜಾರಿ v/s ಜಾರಕಿಹೊಳಿ ಸ್ವರ್ಧೆ ಎಂದು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಹೇಳಿದರು
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರದಂದು ಬಿಜೆಪಿ ನಾಯಕರಿಂದ ನಡೆದ ಮನವಲಿಕೆ ಪ್ರಸನದ ನಂತರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು ಕಳೆದ ಬಾರಿ ಬಿಜೆಪಿ ಪಕ್ಷದಿಂದ ಸ್ವರ್ಧಿಸಿದರಿಂದ ಸಹಜವಾಗಿ ಬಿಜೆಪಿ ನಾಯಕರು ನನನ್ನು ಸಂಪರ್ಕಿಸಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಆದರೆ ನನ್ನ ಬೆಂಬಲಿಗರ ಒತ್ತೆಯಾಸೆಯಂತೆ ಸ್ವರ್ಧೆಯಲ್ಲಿದ್ದೇನೆ .
ನನ್ನನ್ನು ದೂರವಾಣಿ ಮುಖಾಂತರ ಸಂಪರ್ಕಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಹಿಂತಹ ಪ್ರಸಂಗಗಳು ನಡೆಯುವದು ಸಹಜ ಯಾವುದಕ್ಕೂ ಎದೆಗುಂದ ಬೇಡಿ ಈ ಚುನಾವಣೆಯನ್ನು ಅದರಲ್ಲೂ ಗೋಕಾಕ ಕ್ಷೇತ್ರದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ನಿಮ್ಮ ಗೆಲುವಿಗೆ ಸಹಕರಿಸುತ್ತೇನೆಂದು ಭರವಸೆ ನೀಡಿದ್ದಾರೆ ಆದಷ್ಟು ಬೇಗ ಚುನಾವಣೆ ಪ್ರಚಾರಕ್ಕೆ ಕುಮಾರಸ್ವಾಮಿ ಬರಲಿದ್ದಾರೆ ಎಂದು ಅಶೋಕ ಬೆಂಗಳೂರಿನಲ್ಲಿ ಚುಪಾವಣಾ ಪ್ರಚಾರಾರ್ಥ ಸಭೆ ಕರೆದಿದ್ದಾರೆ ಅದರಲ್ಲಿ ಭಾಗವಹಿಸಿ ಬಂದು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗುವದಾಗಿ ತಿಳಿಸಿದರು
ಜೊಳಿಗೆ ಹಾಕಿ ಪ್ರಚಾರ : ಬರುವ ಸೋಮವಾರದಿಂದ ನಗರದ ಅಂಬಿಗೇರ ಗಲ್ಲಿಯಲ್ಲಿರುವ ನಮ್ಮ ಮನೆಯಿಂದ ಪ್ರಚಾರ ಪ್ರಾರಂಭಿಸಲಿರುವ ಅಶೋಕ ಪೂಜಾರಿ ಪಕ್ಷದ ಅಜೆಂಡಾಕ್ಕಿಂತಲೂ ವಯಕ್ತಿಕವಾಗಿ ಕುಟುಂಬದ ಸದಸ್ಯರೊಂದಿಗೆ ಜೊಳಿಗೆ ಹಾಕಿ ಮತ ಹಾಗೂ ಹಣ ನೀಡುವಂತೆ ಕೇಳಲಾಗುವದು ಜೊಳಿಗೆ ಯಿಂದ ಹಣವನ್ನು ಚುನಾವಣೆಯ ಖರ್ಚಿಕ್ಕೆ ಬಳಸಿಕೋಳಲಿದ್ದಾರೆ
ಪಕ್ಷೇತರ ಅಭ್ಯರ್ಥಿ ಪ್ರಕಾಶ ಬಾಗೋಜಿ ಬೆಂಬಲ : ಉಪ ಚುನಾವಣಾಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ನಗರದ ಪ್ರಕಾಶ ಬಾಗೋಜಿ ಅವರು ಕಣದಲ್ಲಿ ಉಳಿದು ಜೆಡಿಎಸ್ ಪಕ್ಷದ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಬೆಂಬಲ ಘೋಷಿಸಿದ್ದಾರೆ