RNI NO. KARKAN/2006/27779|Thursday, May 21, 2026
You are here: Home » breaking news » ಗೋಕಾಕ:ಹನಿಟ್ರ್ಯಾಫ ಮೂಲಕ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅಂಧರ್

ಗೋಕಾಕ:ಹನಿಟ್ರ್ಯಾಫ ಮೂಲಕ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅಂಧರ್ 

ಹನಿಟ್ರ್ಯಾಫ ಮೂಲಕ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅಂಧರ್

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 11 

 

 

ನಗರದಲ್ಲಿ ಹನಿಟ್ರ್ಯಾಫ ಮೂಲಕ ಸುಲಿಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ

ನಗರದ ರವಿ ಕಡಕೋಳ ಮತ್ತು ಸತೀಶ ಹರಿಜನ ಎಂಬುವವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ

ಪ್ರಕರಣದ ಹಿನ್ನೆಲೆ : ಶಿಂಗಳಾಪೂರ ಗ್ರಾಮದ ಮಹಿಳೆಯೊಬ್ಬಳ ಜೊತೆಗೂಡಿ ನಗರದ ಐದು ಜನರನ್ನು ಬಂಧಿಸಿದ್ದರು ಅದೇ ಪ್ರಕಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರವಿ ಕಡಕೋಳ ಮತ್ತು ಸತೀಶ ಹರಿಜನ ಅವರು ಯರಗಟ್ಟಿಯ ರಮೇಶ ಮಹಾದೇವ ಕಟ್ಟಿಮನಿ (28) ಎಂಬುವವನಿಗೆ ಮೇಲಿಂದ ಮೇಲೆ ಪೋನ ಮಾಡಿ ಲಕ್ಷ್ಮೀ ಚಿಗಡೋಳಿ ಹನಿಟ್ರ್ಯಾಫ ಕೇಸದಲ್ಲಿ ನಿನ್ನ ಹೆಸರು ಇದೆ ನಿನ್ನನ್ನು ಸಹ ಪೊಲೀಸರು ಬಂಧಿಸುತ್ತಾರೆ ನಿನ್ನ ಹೆಸರು ಕೈ ಬಿಡಲು 3 ಲಕ್ಷ ರೂ ನೀಡಬೇಕು ಎಂದು ಹೆದರಿಸಿದ್ದಾರೆ ಎಂದ ಪಿರ್ಯಾದಿದಾರ ರಮೇಶ ಮಹಾದೇವ ಕಟ್ಟಮನಿ ತಾನು ದಾಖಲಿಸಿದ ಪಿರ್ಯಾದಿಯಲ್ಲಿ ನಮುದಿಸಿದ್ದಾನೆ
ಐಪಿಸಿ 384, 420 ಸಹ ಕಲಂ 34 ಅಡಿಯಲ್ಲಿ ಗೋಕಾಕ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

 

Related posts: