ಘಟಪ್ರಭಾ:ಸ್ವಾತಂತ್ರ್ಯೋತ್ಸವದ ನಿಮಿತ್ತ ಧುಪದಾಳದಲ್ಲಿ ವನಮಹೋತ್ಸವ ಆಚರಣೆ
ಸ್ವಾತಂತ್ರ್ಯೋತ್ಸವದ ನಿಮಿತ್ತ ಧುಪದಾಳದಲ್ಲಿ ವನಮಹೋತ್ಸವ ಆಚರಣೆ
ಘಟಪ್ರಭಾ ಅ 17: ಸಮೀಪದ ಧುಪದಾಳ ಗ್ರಾಮದ ಸ.ಹಿ.ಪ್ರಾ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ವನ ಮಹೋತ್ಸವ ಆಚರಿಸಲಾಯಿತು.
ಸಸಿ ನೆಡುವ ಕಾರ್ಯಕ್ರಮಕ್ಕೆ ತಾ.ಪಂ ಸದಸ್ಯ ಲಗಮಣ್ಣ ನಾಗನ್ನವರ ಚಾಲನೆ ನೀಡಿದರು. ಗ್ರಾ.ಪಂ ಸದಸ್ಯ ಶ್ರೀಮತಿ ಭಾಗಿರಥಿ ಕೋಳಿ, ಬಸೀರ ಬನಜವಾಡ, ಗ್ರಾಮಸ್ಥರಾದ ವಿಠ್ಠಲ ಮಲ್ಲಾಪೂರ, ತಂಗೆವ್ವ ನಾಯಿಕ, ಫರೀದಾ ಬನಜವಾಡ, ಪ್ರಧಾನ ಗುರುಗಳಾದ ಎ.ವಾಯ್ ಮಳಲಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಇದ್ದರು.