RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ನೆರೆ ಪೀಡಿತ ಜನರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಶಾಸಕ ಸತೀಶ ಸೂಚನೆ

ಗೋಕಾಕ:ನೆರೆ ಪೀಡಿತ ಜನರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಶಾಸಕ ಸತೀಶ ಸೂಚನೆ 

ನೆರೆ ಪೀಡಿತ ಜನರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಶಾಸಕ ಸತೀಶ ಸೂಚನೆ

 
ನಮ್ಮ ಬೆಳಗಾವಿ ಇ -ವಾರ್ತೆ , ಗೋಕಾಕ ನ 7

 

ನೆರೆ ಪೀಡಿತ ಜನರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಗೋಕಾಕ ತಹಶೀಲದಾರರಿಗೆ ಸೂಚಿಸಿದರು.
ಅವರು ಗುರುವಾರದಂದು ಮುಂಜಾನೆ ತಹಶೀಲದಾರ ಕಾರ್ಯಾಲಯಕ್ಕೆ ಅಕಸ್ಮಿಕ ಭೇಟಿ ನೀಡಿ ತಹಶೀಲದಾರರ ಜೊತೆ ಚರ್ಚೆ ನಡೆಸಿ ಸರ್ವೆ ಕಾರ್ಯ ಸರಿಯಾಗಿ ನಡೆಸಿ ನೆರೆಯಿಂದ ತೊಂದರೆಗೊಳಗಾದ ಪ್ರತಿಯೊಬ್ಬ ವ್ಯಕ್ತಿಗೂ ಸರಕಾರದ ಪರಿಹಾರ ಸರಿಯಾಗಿ ಹೋಗಿ ಮುಟ್ಟುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಮಿನಿ ವಿಧಾನಸೌಧದ ಮುಂದೆ ಬೈಕ್ ನಿಲುಗಡೆ ಸಂಬಂಧವಾಗಿ ತೀವ್ರ ತರಾಟೆಗೆ ತೆಗೆದುಕೊಂಡ ಸತೀಶ ಜಾರಕಿಹೊಳಿ ಅವರು ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ಮತ್ತು ಶಿಸ್ತುಬದ್ಧ ನಿಲ್ಲುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಅಲ್ಲಿಂದ ನೇರವಾಗಿ ನಗರಸಭೆ ಕಾರ್ಯಾಲಯಕ್ಕೆ ಬಂದ ಶಾಸಕರು ಅಲ್ಲಿ ನಗರಸಭೆ ಸದಸ್ಯರ ಜೊತೆ ಮಾತುಕತೆ ನಡೆಸಿದರು.
ಈವರೆಗೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದ ಸರಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಸಕ ಸತೀಶ ಜಾರಕಿಹೊಳಿ ಅವರು ಮೇಲಿಂದ ಮೇಲೆ ನಗರದ ಕಚೇರಿಗಳಿಗೆ ಭೇಟಿ ನೀಡುತ್ತಿರುವದರಿಂದ ಯಾವಾಗ ತಮ್ಮ ಕಚೇರಿಗೆ ಶಾಸಕರು ಬರುತ್ತಾರೆ ಎಂದು ತಿಳಿಯದೆ ಸರಕಾರಿ ನೌಕರರಲ್ಲಿ ಭೀತಿ ಉಂಟಾಗಿದೆ.

Related posts: