RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಜಿಲ್ಲಾಧಿಕಾರಿ ಭೇಟಿ ಹಿನ್ನೆಲೆ : ಮಿನಿ ವಿಧಾನಸೌಧಕ್ಕೆ ಬರುವ ಸಾರ್ವಜನಿಕರಿಗೆ ಸೈನಿಟೈಜರ ಹಾಗೂ ಥರ್ಮಲ್ ಸ್ಕ್ಯಾನಿಂಗ್

ಗೋಕಾಕ:ಜಿಲ್ಲಾಧಿಕಾರಿ ಭೇಟಿ ಹಿನ್ನೆಲೆ : ಮಿನಿ ವಿಧಾನಸೌಧಕ್ಕೆ ಬರುವ ಸಾರ್ವಜನಿಕರಿಗೆ ಸೈನಿಟೈಜರ ಹಾಗೂ ಥರ್ಮಲ್ ಸ್ಕ್ಯಾನಿಂಗ್ 

ಜಿಲ್ಲಾಧಿಕಾರಿ ಭೇಟಿ ಹಿನ್ನೆಲೆ : ಮಿನಿ ವಿಧಾನಸೌಧಕ್ಕೆ ಬರುವ ಸಾರ್ವಜನಿಕರಿಗೆ ಸೈನಿಟೈಜರ ಹಾಗೂ ಥರ್ಮಲ್ ಸ್ಕ್ಯಾನಿಂಗ್

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 3 :

 

 

ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಎಚ್ಚತ್ತುಕೊಂಡಿರುವ ಗೋಕಾಕ ತಾಲೂಕಾಡಳಿತ ಮಿನಿ ವಿಧಾನಸೌಧಕ್ಕೆ ಬರುವ ಸಾರ್ವಜನಿಕರಿಗೆ ಸೈನಿಟೈಜರ ಹಾಗೂ ಥರ್ಮಲ್ ಸ್ಕ್ಯಾನಿಂಗ್ (ತಪಾಸಣೆಗೆ) ಒಳಪಡಿಸುತ್ತಿದ್ದಾರೆ.


ಮಂಗಳವಾರ ಅಷ್ಟೇ ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವದರಿಂದ ಮುಂಜಾಗ್ರತಾ ಕ್ರಮವಾಗಿ ಸರಕಾರಿ ಕಛೇರಿಗೆ ಆಗಮಿಸುವ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ ದಿನಕ್ಕೆ 2-3 ಸಾರೆ ಕಛೇರಿಯ ಆವರಣವನ್ನು ಸಂಪೂರ್ಣ ಸೈನಿಟೈಜರ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು ಪ್ರತಿದಿನ ಹೆಸರಿಗಷ್ಟೇ ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ಮಾಡುತ್ತಾರೆ. ಆದರೆ ಇಂದು ಜಿಲ್ಲಾಧಿಕಾರಿಗಳು ಸಭೆ ನಡೆಸಲು ಬಂದಿರುವದರಿಂದ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸೈನಿಟೈಜರ ಮಾಡುತ್ತಿದ್ದಾರೆ. ಉಳಿದ ಸಮಯದಲ್ಲಿ ಇಲ್ಲಿ ಯಾರೂ ಇರುವದೇ ಇಲ್ಲ ಎಂದು ಖಾರವಾಗಿ ಹೇಳಿದರು.
ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ತಾಲೂಕಾಡಳಿತ ಉನ್ನತಾಧಿಕಾರಿಗಳು ಬಂದಾಗ ಮಾತ್ರ ಸ್ವಚ್ಛತೆ ಹಾಗೂ ಆರೋಗ್ಯ ತಪಾಸಣೆದಂತಹ ಕ್ರಮ ಕೈಗೊಂಡ ತಾಲೂಕಾಡಳಿತದ ಕ್ರಮ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Related posts: