RNI NO. KARKAN/2006/27779|Tuesday, December 30, 2025
You are here: Home » breaking news » ಗೋಕಾಕ:ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮ

ಗೋಕಾಕ:ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮ 

ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 2 :

 
ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿದಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಜಾಗೃತಿ ಮೂಡಿಸುವಂತಹ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.
ಪ್ರತಿದಿನ ಜಾನಪದ ಹಾಡುಗಳು, ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕೆ ಬೇಡವೇ. ಎಂಬ ವಿಷಯದ ಕುರಿತು ಪ್ರಬಂಧ ಹಾಗೂ ಭಾಷಣ ಸ್ಪರ್ಧೆ, ವಚನಗಳು ಹಾಗೂ ಅದರ ಭಾವಾರ್ಥ, ಕನ್ನಡ ನುಡಿ ಮತ್ತು ಪ್ರಶ್ನಾವಳಿ ಕುರಿತು ಹಾಡುಗಳ ಸ್ಪರ್ಧೆಗಳನ್ನು ೭ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯೋಪಾಧ್ಯಾಯಿನಿ. ಸಿ.ಬಿ.ಪಾಗದ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಜಿ.ಪಾಟೀಲ ಅವರು ತಿಳಿಸಿದ್ದಾರೆ. ಶನಿವಾರದಂದು ಮುಂಜಾನೆ ಸಪ್ತಾಹದ ನಿಮಿತ್ಯ ವಿವಿಧ ವೇಷಭೂಷಣಗಳ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.

Related posts: