RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು : ಆರೋಗ್ಯಸ್ವಾಮಿ ಎ.ಕೆ

ಗೋಕಾಕ:ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು : ಆರೋಗ್ಯಸ್ವಾಮಿ ಎ.ಕೆ 

ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು : ಆರೋಗ್ಯಸ್ವಾಮಿ ಎ.ಕೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 4 :

 
ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡಿರುವುದರಿಂದ ಉನ್ನತ ಶಿಕ್ಷಣ ಅಥವಾ ಉದ್ಯೋಗದೊಂದಿಗೆ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ಬಿಸಿಇ ,ಸಿಸಿಎ ಕಾಲೇಜ ಧಾರವಾಡದ ಪ್ರಾಚಾರ್ಯ ಆರೋಗ್ಯಸ್ವಾಮಿ ಎ.ಕೆ ಹೇಳಿದರು.
ಶನಿವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಸಭಾಂಗಣದಲ್ಲಿ ನಡೆದ ಶ್ರೀ ಶಿದ್ದಲಿಂಗೇಶ್ವರ ಬಿಸಿಎ ಕಾಲೇಜ ಗೋಕಾಕ ಕೊನೆಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಮತ್ತು ಪಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದುಡ್ಡು ಕೆಟ್ಟದಲ್ಲ ದುಡ್ಡು ಮಾಡುವ ದಾರಿಗಳು ಕೆಟ್ಟ ಮತ್ತು ಒಳ್ಳೆಯದಾಗಿವೆ. ಅವರುಗಳನ್ನು ಅರಿತುಕೊಂಡು ನಾವು ನಮ್ಮ ಜೀವನವನ್ನು ಸಾಗಿಸಬೇಕು. ವಿದ್ಯಾರ್ಥಿ ದಿಸೆಯಲ್ಲಿ ಹೆಚ್ಚಿನ ಜನರು ದುಡ್ಡು ಗಳಿಸುವ ನೆಪದಲ್ಲಿ ದಾರಿ ತಪ್ಪುವ ಉದಾಹರಣೆಗಳು ಸಾಕಷ್ಟಿವೆ. ವಿದ್ಯಾರ್ಥಿ ಜೀವನದಲ್ಲಿ ಇದರ ಬಗ್ಗೆ ಯೋಚನೆ ಮಾಡದೆ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಹೊಂದಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯ ಭವಿಷ್ಯವನ್ನು ಕಂಡುಕೊಳ್ಳಬಹುದು. ನಮ್ಮನ್ನು ನಾವು ಎಷ್ಟು ಪ್ರೀತಿಸುತ್ತೇವೆ ಅಷ್ಟೇ ಪ್ರೀತಿ ಬೇರೆಯವರ ಬಗ್ಗೆ ತೋರಿಬೇಕು. ಬೇರೆಯವರ ಭವಿಷ್ಯದ ಬಗ್ಗೆ ವಿಚಾರ ಮಾಡದೆ ತಮ್ಮ ಭವಿಷ್ಯದ ಬಗ್ಗೆ ವಿಚಾರ ಮಾಡಿದರೆ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ, ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳತ್ತಿದ್ದಾರೆ. ಆಧುನಿಕ ಯಂತ್ರಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಉಜ್ವಲಗೋಳಿಸಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ , ತಮ್ಮ ಅನುಭವಗಳನ್ನು ಹಂಚಿಕೊಂಡರು.
ಉಪನ್ಯಾಸಿಕಿ ಅಕ್ಷತಾ ಬೆಣ್ಣಿ ಸ್ವಾಗತಿಸಿದರು, ಕಾರ್ಯಕ್ರಮವನ್ನು ವಿದ್ಯಾರ್ಥಿ ಹರೀಶ ನಿರೂಪಿಸಿ, ವಂದಿಸಿದರು

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಈಟಿ , ಆಡಳಿತಾಧಿಕಾರಿ ಅಡಿವೇಶ ಗವಿಮಠ ಉಪಸ್ಥಿತರಿದ್ದರು

Related posts: