RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ : ಅಯಾಜ್ ಮುಲ್ಲಾ

ಗೋಕಾಕ:ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ : ಅಯಾಜ್ ಮುಲ್ಲಾ 

ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ : ಅಯಾಜ್ ಮುಲ್ಲಾ

ಗೋಕಾಕ ಮೇ 13 : ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಅದನ್ನು ಅರ್ಥಪೂರ್ಣವಾಗಿ ಸದುಪಯೋಗ ಪಡೆಸಿಕೊಂಡು ಸಾಧಕರಾಗಬೇಕು ಎಂದು ಬೆಳಗಾವಿಯ ಮೊಹಮ್ಮದಅಯಾಜ್ ಮುಲ್ಲಾ ಹೇಳಿದರು

ಮಂಗಳವಾರದಂದು ನಗರದ ನೂರಾನಿ ಶಾದಿ ಮಹಲನಲ್ಲಿ ಹಜರತ್ ಮೌಲಾನಾ ಶೇಖ ಖಲೀಲುರ್ರ ರಹಮಾನ ಸಜ್ಜಾದ ನೋಮಾನಿ ಇವರ ಮಾರ್ಗದರ್ಶನದಲ್ಲಿ ಇಲ್ಲಿನ ರಹಮಾನ್ ಪೌಂಡೇಶನ್ ಮತ್ತು ತುಬಾ ಪೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ಪ್ರೇರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಯುಗದಲ್ಲಿ ಶಿಕ್ಷಣ ಇಲ್ಲವೆಂದರೆ ಎಲ್ಲವೂ ಶೂನ್ಯ ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ವಿದ್ಯಾಭ್ಯಾಸ ಮಾಡಬೇಕು. ಉತ್ತಮ ಶಿಕ್ಷಣದ ಕೊರೆತೆ ಇದ್ದು ಅದನ್ನು ಶಿಕ್ಷಕರೊಂದಿಗೆ ಸಂವಾದ ಮಾಡಿಕೊಂಡು ಸರಿಯಾದ ಶಿಕ್ಷಣ ಪಡೆದುಕೊಳ್ಳು ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ವಿದ್ಯಾರ್ಥಿಗಳು ಬರೀ ವಿದ್ಯಾಭ್ಯಾಸ ಮಾಡದೆ ಸಾಧಕರಾಗಬೇಕು ಎಂದು ಹಠತೊಟ್ಟು ವಿದ್ಯಾಭ್ಯಾಸ ಮಾಡಬೇಕು ಆಗ ತಾವು ಅಂದುಕೊಂಡುದನ್ನು ಸಾಧಿಸಲು ಸಾಧ್ಯ ಎಂದ ಅವರು ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯ ಇಂದು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡುತ್ತಿರುವುದರಿಂದ ದೇಶ ಹೆಮ್ಮೆ ಪಡೆದುತ್ತಿದೆ. ಇಂತಹ ಸಾಧಕರ ಸಾಧನೆಯಿಂದ ಪ್ರೇರಣಗೊಂಡು ತಾವು ಸಹ ಸಾಧಕರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿ.ಕಾಂ ಪರೀಕ್ಷೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದ ಕುಮಾರಿ ಬಶೀರಾ ಮಿಲಾದಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ಲಾ ,ಖಾರಿ ಯೂನೂಸ, ಅಬ್ದುಲ್ ರಹಮಾನ್ ದೇಸಾಯಿ, ಹಾಜಿ ಸಲೀಂ ಅಮ್ಮಣಗಿ, ರಿಜ್ವಾನ ಜಮಾದಾರ , ಆರೀಫ ಸಾವಳಗಿ, ಶಾಹಿದಹುಸೇನ್ ಪಟೇಲ್, ರಿಯಾಜ ಸೂರ್ಯಾಗೋಳ, ಇರ್ಫಾನ್ ಬೋಜಗರ, ಆಫತಾಬ ಕಮತನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: