ಗೋಕಾಕ:ಇನ್ನೇರಡು ಘಂಟೆಗಳಲ್ಲಿ ಬೃಹದಾಕಾರದ ಬಂಡೆಗಲ್ಲು ತೆರವು ಕಾರ್ಯಾಚರಣೆ ಪೂರ್ಣ

ಇನ್ನೇರಡು ಘಂಟೆಗಳಲ್ಲಿ ಬೃಹದಾಕಾರದ ಬಂಡೆಗಲ್ಲು ತೆರವು ಕಾರ್ಯಾಚರಣೆ ಪೂರ್ಣ
ನಮ್ಮ ಬೆಳಗಾವಿ ಇ -ವಾರ್ತೆ ಗೋಕಾಕ ಅ 24 :
ಕೆಳೆದ ಮೂರನಾಲ್ಕು ದಿನಗಳಿಂದ ಮಲ್ಲಿಕಸಾಬ / ಮಲ್ಲಿಕಾರ್ಜುನ ಗುಡ್ಡದ ಜನರ ನಿದ್ದೆ ಕೆಡಸಿರುವ ಬೃಹದಾಕಾರದ ಬಂಡೆಗಲ್ಲುಗಳ ತೆರವು ಕಾರ್ಯಾಚರಣೆ ಗುರುವಾರವು ಸಹ ಮುಂದೆ ವರೆದ್ದಿದ್ದು , ಇನ್ನೇರೆಡು ಘಂಟೆಗಳಲ್ಲಿ ಸಂಪೂರ್ಣ ಕಾರ್ಯಾಚರಣೆ ಪೂರ್ಣಗೋಳ್ಳಲಿದೆ ಎಂದು ಕಾರ್ಯಚರಣೆಯಲ್ಲಿ ಭಾಗಿಯಾಗಿರುವ ಸತೀಶ ಪೌಂಡೇಶನ್ ನ ಆರೀಪ ಪೀರಜಾದೆ ತಿಳಿಸಿದ್ದಾರೆ
ಎರೆಡು ದಿನಗಳಿಂದ ಈ ಬೃಹದಾಕಾರದ ಬಂಡೆಗಲ್ಲುಗಳನ್ನು ತೆರುವು ಗೋಳಿಸುವ ಕಾರ್ಯಾಚರಣೆಯಲ್ಲಿ ಪುಣೆಯ ಎನ್.ಡಿ.ಆರ್.ಎಫ್ ತಂಡದ 25 ಜನರ ಸದಸ್ಯರು , ರಾಜಸ್ಥಾನ ,ಇಳಕಲ್ ನ ಬಂಡೆಕಲ್ಲು ಕೋರೆಯುವ ತಜ್ಞರು ಸತತ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ
ಎನ್.ಡಿ ಆರ್.ಎಫ್ ನ ಮುಖ್ಯಸ್ಥ ಬಿ.ಎಸ್.ಪ್ರಸಾದರಾವ್ ಸ್ಥಳದಲ್ಲೇ ಇದ್ದು ಬಂಡೆಗಲ್ಲುಗಳ ತೆರುವು ಕಾರ್ಯಚರಣೆಯಲ್ಲಿ ಭಾಗಿಯಾಗಿರುವ ತಜ್ಞರಿಗೆ ಸುರಕ್ಷಿತ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ
ಸುಮಾರು 210 ಟನ್ ತೂಕದ ಬಂಡೆಗಲ್ಲು ಬ್ಲಾಸ್ಟಿಂಗ್ ಮಾಡಿ ಮೊದಲ ಕಾರ್ಯಚರಣೆಯನ್ನು ಯಶಸ್ವಿಗೋಳಿಸಲಾಗಿದ್ದೆ . ನಾಲ್ಕು ರಂದ್ರದಲ್ಲಿ ಮದ್ದು ತುಂಬಿ ಬ್ಲಾಸ್ಟ್ ಮಾಡುವ ಕಾರ್ಯ ಭರದಿಂದ ಸಾಗಿದ್ದು
ಇನ್ನೇರೆಡು ಗಂಟೆಯಲ್ಲಿ ಆಪರೇಷನ್ ಬೃಹತ್ ಬಂಡೆ ಕಾರ್ಯಾಚರಣೆ ಮುಗಿಯುವ ಸಾಧ್ಯತೆ ಇದೆ