ಗೋಕಾಕ:ನೆರೆ ಸಂತ್ರಸ್ತರಿಗೆ ಬೆಂಗಳೂರಿನ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರರ ಸಂಘಟನೆ ವತಿಯಿಂದ ಅಗತ್ಯ ವಸ್ತುಗಳ ವಿತರಣೆ

ನೆರೆ ಸಂತ್ರಸ್ತರಿಗೆ ಬೆಂಗಳೂರಿನ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರರ ಸಂಘಟನೆ ವತಿಯಿಂದ ಅಗತ್ಯ ವಸ್ತುಗಳ ವಿತರಣೆ
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಸೆ 22 :
ಪ್ರವಾಹದಿಂದ ಹಾನಿಗೊಳಗಾದ ನೆರೆ ಸಂತ್ರಸ್ತರಿಗೆ ಬೆಂಗಳೂರಿನ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರರ ಸಂಘಟನೆ ವತಿಯಿಂದ ಅಗತ್ಯ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು
ರವಿವಾರದಂದು ಸಾಯಂಕಾಲ ನಗರದ ಭಗವಾನ್ ಶೇಡಜೀ ಕೂಟನಲ್ಲಿ ವಾಸುದೇವ ಪತ್ತಾರ ಅವರ ಮನೆಯಲ್ಲಿ ಸೇರಿ ಅಗತ್ಯ ದಿನಬಳಕೆಯ ವಸ್ತುಗಳನ್ನು ವಿತರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷೆ ಶೀಮತಿ ಗಾಯತ್ರಿ ಚಂದ್ರಶೇಖರ ಹಿಂದೆಂದು ಕಂಡು ಕಾಣದ ಜಲಪ್ರಳಯಕ್ಕೆ ಸಾಕ್ಷೀಯಾಗಿ ಸಾವಿರಾರು ಜನರು ಮನೆ ಮಠ ಬಿದ್ದು ಹೋಗಿ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ ಅವರ ಬದುಕನ್ನು ಕಟ್ಟಿ ಕೋಡಲು ಅವರಿಗೆ ಮಾನಸಿಕವಾಗಿ ಗಟ್ಟಿ ಗೋಳಿಸುವ ದಿಸೆಯಲ್ಲಿ ರಾಜ್ಯದ ಮೂಲೆ, ಮೂಲೆಯಲ್ಲಿಯ ಸಂಘಟನೆಗಳು ಎದ್ದು ಸ್ವಯಂ ಪ್ರೇರಣೆಯಿಂದ ಸಂತ್ರಸ್ತರಿಗೆ ನಿಜವಾದ ಸಹಕಾರ ನೀಡಬೇಕಾಗಿದೆ ಎಂದು ಶ್ರೀಮತಿ ಗಾಯತ್ರಿ ಚಂದ್ರಶೇಖರ್ ಹೇಳಿದರು
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶ್ರೀಮತಿ ಗಾಯತ್ರಿ ಚಂದ್ರಶೇಖರ್, ಸಿದ್ಧಾರೂಢ ಬಡಿಗೇರ, ರಾಜೇಶಾ, ವಿಜಯಪುರ ಜಿಲ್ಲಾಧ್ಯಕ್ಷ ವಿರುಪಾಕ್ಷಿ ಬಡಿಗೇರ, ಹೋರಾಟ ಸಮಿತಿಯ ಬೆಳಗಾವಿ ಜಿಲ್ಲಾ ಅಧ್ಯಕ್ಷ ಸುರೇಶ ಪತ್ತಾರ,ಆನಂದ ಕಮ್ಮಾರ, ಮುಗುಟ ಪೈಲವಾನ, ಸೇರಿದಂತೆ ಅನೇಕರು ಇದ್ಧರು