ಗೋಕಾಕ:ನೆರೆ ಪೀಡಿತರಿಗೆ ನೆರವಾದ ಸತೀಶ ಜಾರಕಿಹೊಳಿ ಫೌಂಡೇಶನ್ ಮತ್ತು ಸತೀಶ ಶುಗರ್ಸ ಲಿಮಿಟೆಡ್

ನೆರೆ ಪೀಡಿತರಿಗೆ ನೆರವಾದ ಸತೀಶ ಜಾರಕಿಹೊಳಿ ಫೌಂಡೇಶನ್ ಮತ್ತು ಸತೀಶ ಶುಗರ್ಸ ಲಿಮಿಟೆಡ್
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 23 :
ನೆರೆ ಪ್ರವಾಹದಿಂದ ಭಾರಿ ಪ್ರಮಾಣದಲ್ಲಿ ಹಾಳಾದ ರಸ್ತೆ , ಗಟಾರು ಮತ್ತು ಬಿದ್ದ ಮನೆಗಳ ಮಣ್ಣು ತೆಗೆಯುವ ಕಾರ್ಯವನ್ನು ನಗರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ಮತ್ತು ಸತೀಶ ಶುಗರ್ಸ ಲಿಮಿಟೆಡ್ ನಿಂದ ಭರದಿಂದ ಸಾಗಿದೆ.
ಸೂರು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳಿಗೆ ಶಾಸಕ ಸತೀಶ ಜಾರಕಿಹೊಳಿ ಅವರ ಈ ಕಾರ್ಯ ತುಂಬಾ ಸಹಕಾರಿಯಾಗಿ ಪರಿಣಮಿಸಿದೆ
ಕಳೆದ 9 ದಿನಗಳಿಂದ ನಗರದ ಪ್ರವಾಹ ಪೀಡಿತ ಪ್ರದೇಶಗಳಾದ ಉಪ್ಪಾರ ಓಣಿ,ವಡ್ಡರ ಓಣಿ,ಲಕ್ಕಡ ಓಣಿ, ಮಾಲದಾರ ಓಣಿ , ಜಿನಗಾರ ಓಣಿ,ಫನಿಬಂದ ಓಣಿ, ಢೋರ ಓಣಿ,ಕೀಲ್ಲಾ, ಅಂಬಿಗೇರ ಓಣಿ,ಬೋಜಗಾರ ಓಣಿ, ದಾಳಂಬ್ರಿ ತೋಟ, ಪುಂಡಿಕೇರಿ ಓಣಿ, ಬಣಗಾರ ಓಣಿ, ಜೈನರ ಓಣಿ ಸೇರಿದಂತೆ ಆಶ್ರಯ ಬಡಾವಣೆ, ಯೋಗಿಕೋಳ್ಳ ರಸ್ತೆ, ನಾಕಾ ರೋಡ, ಶೆಟ್ಟೆವ್ವನ ತೋಟದಿಂದ ನಾಕಾ ವರೆಗಿನ ಒಳ ರಸ್ತೆ ಹಾಗೂ ಇನ್ನೀತರ ಪ್ರವಾಹದಿಂ ಹಾಳಾಗಿದ್ದು , ಕಳೆದ ಒಂದು ವಾರದಿಂದಲೂ ಹೆಚ್ಚಿನ ಕಾಲ ರಸ್ತೆ,.ಗಟಾರು, ಬಿದ್ದ ಮನೆಗಳ ಮಣ್ಣು , ಓಣಿಯಿಂದ ಓಣಿಗೆ ಕನೆಕ್ಟ್ ಮಾಡುವ ಒಳ ರಸ್ತೆಗಳ ಮೇಲೆ ಬಿದ್ದ ಮೋನಕಾಲುದ್ದ ಮಣ್ಣನ್ನು ಸತೀಶ ಶುಗರ್ಸ ಲಿಮಿಟೆಡ್ ನ ಕಾರ್ಮಿಕರು ತೆರವುಗೊಳಿಸಿ ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗಿದ್ದಾರೆ.
ಟ್ರ್ಯಾಕ್ಟರ್, ಜೆಸಿಬಿ ಮತ್ತು ಕಾರ್ಮಿಕರ ಬಳಕೆ : ಕಳೆದ ಒಂದು ವಾರದ ಹಿಂದೆ ಸುರಿದ ಭಾರಿ ಪ್ರಮಾಣದ ಮಳೆಯಿಂದ ಉಂಟಾದ ಪ್ರವಾಹದಿಂದ ನಗರದಲ್ಲಿ ಸುಮಾರು 4500 ಮಣ್ಣಿನ ಮನೆಗಳು ಬಿದ್ದು ಆಯಾ ಪ್ರದೇಶಗಳಲ್ಲಿ ನಡೆದಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಇಲ್ಲಿ ಬಿದ್ದ ಮಣ್ಣು ಮತ್ತು ತ್ಯಾಜ್ಯವನ್ನು ತೆರವು ಗೊಳಿಸುವದೆ ಒಂದು ಸವಾಲಿನ ಕೆಲಸವಾಗಿತ್ತು ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಲು ಬಂದಿದ್ದ ಶಾಸಕ ಸತೀಶ ಜಾರಕಿಹೊಳಿ ಇದನ್ನು ಅರಿತು ತಮ್ಮ ಕಾರಖಾನೆಯಿಂದ 8.ಜೆಸಿಬಿ,1 ಡೋಜರ, 40 ಟ್ರ್ಯಾಕ್ಟರ್ ಮತ್ತು 220 ಖಾಸಗಿ ಕಾರ್ಮಿಕರನ್ನು ನಿಯೋಜಿಸಿ ಕಳೆದ 9 ದಿನಗಳಿಂದ ಪ್ರವಾಹದಿಂದ ಹಾಳಾಗಿದ ಓಣಿಗಳ ಪ್ರಮುಖ ರಸ್ತೆ , ಒಳರಸ್ತೆ ಬಿದ್ದ ಮನೆಗಳ ಮಣ್ಣು , ತ್ಯಾಜ್ಯವನ್ನು ತೆರುವು ಗೋಳಿಸಿ ಓಣಿ ಓಣಿಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆಗಳನ್ನು ನಡೆದಾಡಲು ಮುಕ್ತಗೊಳಿಸಿದ್ದಾರೆ. ಈ ಕಾರ್ಯ ಬರುವ ದಿನಾಂಕ 25 ರವಿವಾರದ ವರೆಗೆ ನಡೆಯಲಿದೆ
ಶಿಂಗಳಾಪೂರ ಸೇತುವೆ ತೆರುವಿಗೆ ಶ್ರಮದಾನ:
ಘಟಪ್ರಭಾ ನದಿಗೆ ಬಂದ ಪ್ರವಾಹಕ್ಕೆ ಶಿಂಗಳಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಶಿಂಗಳಾಪೂರ ಮತ್ತು ಲೋಳಸೂರ ಏಕಕಾಲೀ ಮುಳುಗಡೆಗೊಂಡು ಭಾರಿ ಪ್ರಮಾಣದಲ್ಲಿ ಹಾಳಾಗಿತ್ತು ಇದರಿಂದ ಗ್ರಾಮಸ್ಥರು ಗೋಕಾಕ ನಗರಕ್ಕೆ ಬಂದು ಹೋಗಲು ಮತ್ತು ಗ್ರಾಮದಲ್ಲಿ ಬಿದ್ದ ಮನೆಗಳ ಮಣ್ಣು , ರಸ್ತೆಯ ಮೇಲಿನ ಮಣ್ಣುನ್ನು ತೆರವುಗೊಳಿಸಲು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು ಇದನ್ನು ಅರಿತ ಸತೀಶ ಶುಗರ್ಸ ಲಿಮಿಟೆಡ್ ಮತ್ತು ಸತೀಶ ಜಾರಕಿಹೊಳಿ ಫೌಂಡೇಶನ್ ದವರು ಕೇವಲ 8 ಘಂಟೆಗಳಲ್ಲಿ ಶಿಂಗಳಾಪೂರ ಸೇತುವೆಯನ್ನು ದುರಸ್ತಿಗೋಳಿಸಿ ಸಂಚಾರಕ್ಕೆ ಮುಕ್ತಗೋಳಿಸಿ ಮಾನವೀಯತೆಯನ್ನು ಮೆರದಿದ್ದಾರೆ.
ರಿಯಾಜ ಚೌಗಲಾ . ಕಾರ್ಯದರ್ಶಿ ಸತೀಶ ಜಾರಕಿಹೊಳಿ ಫೌಂಡೇಶನ್ :
“ಪ್ರವಾಹದ ಬೀಕರ ಪರಿಸ್ಥಿತಿಯಲ್ಲಿ ಸಿಲುಕಿ ತೊಂದರೆಯಲ್ಲಿರುವ ಸಾರ್ವಜನಿಕರಿಗೆ ಅನುವು ಮಾಡಿಕೋಡುವ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಳೆದ 9 ದಿನಗಳಿಂದ ಸ್ವಚ್ಚತಾ ಕಾರ್ಯ ನಡೆದಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಸಂತ್ರಸ್ತರಿಗೆ ಈ ಕಾರ್ಯ ತುಂಬಾ ಅನುಕೂಲವಾಗಿದೆ ಈ ಸ್ವಚ್ಚತಾ ಕಾರ್ಯ ದಿ.25 ವರೆಗೆ ಮುಂದುವರೆಯಲ್ಲಿದೆ” .
