ಗೋಕಾಕ:ಪ್ರವಾಹ ಸಂತ್ರಸ್ತರಿಗೆ ಶುರುವಾಗಿದೆ ಕಳ್ಳಕಾರರ ಕಾಟ

ಪ್ರವಾಹ ಸಂತ್ರಸ್ತರಿಗೆ ಶುರುವಾಗಿದೆ ಕಳ್ಳಕಾರರ ಕಾಟ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 9 :
ಒಂದು ಕಡೆ ಪ್ರವಾಹ ಹೊಡೆತದಿಂದ ನಲಗುತ್ತಿರುವ ಸಂತ್ರಸ್ತರು ಮತ್ತೊಂದೆಡೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಳ್ಳಕಾಕರಕಾಟ ಹೆಚ್ಚಾಗುತ್ತಿದೆ. ನಗರದ ಪ್ರವಾಹದ ಪ್ರದೇಶಗಳಲ್ಲಿ ಈಜಲು ಉಪಯೋಗಿಸುವ ಸಾಧನಗಳೊಂದಿಗೆ ಕಳ್ಳರು ನೆರೆಯಲ್ಲಿ ಈಜಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಅವರನ್ನು ಕಾಯುವುದೇ ನಿತ್ಯದ ಕಾಯಕವಾಗಿದೆ ಎಂದು ಸಂತ್ರಸ್ತರು ದೂರುತ್ತಿದ್ದಾರೆ.
ಗುರುವಾರದ ಸಂಜೆಯಿಂದ ಮಳೆಯ ಆರ್ಭಟ ಕಡಿಮೆಯಾಗಿತ್ತು ಶುಕ್ರವಾರದಂದು ಸಂಜೆ ವೇಳೆಗೆ ಮಹಾಮಾರಿ ಮಳೆಯು ಮತ್ತೇ ಮುಂದುವರೆದಿದ್ದು ಮತ್ತೆ ಸಂಜೆ ವೇಳೆ 97000 ಕ್ಯೂಸೆಕ್ಸ್ ಹಿಡಕಲ್ ಜಲಾಶಯದಿಂದ ನೀರನ್ನು ಬಿಟ್ಟಿರುವುದರಿಂದ ಇಲ್ಲಿಯ ನೆರೆ ಸಂತ್ರಸ್ತ್ಥರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.