RNI NO. KARKAN/2006/27779|Tuesday, August 11, 2026
You are here: Home » breaking news » ಬೆಳಗಾವಿ:ಸರ್ಕಾರದ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಅಲ್ಲ : ಮಾಜಿ ಸಚಿವ ಸತೀಶ

ಬೆಳಗಾವಿ:ಸರ್ಕಾರದ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಅಲ್ಲ : ಮಾಜಿ ಸಚಿವ ಸತೀಶ 

ಸರ್ಕಾರದ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಅಲ್ಲ : ಮಾಜಿ ಸಚಿವ ಸತೀಶ

ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಜು 26  :

ಮೈತ್ರಿ ಸರ್ಕಾರದ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಅಲ್ಲ, ಒಂದು ವಸ್ತುವಿನ ಕಾರಣದಿಂದ ಸರ್ಕಾರಕ್ಕೆ ಇಂತಹ ಪರಿಸ್ಥಿತಿ ಬಂದಿದ್ದು, ಸಮಯ ಬಂದಾಗ ಅದನ್ನು ಹೇಳುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ  ಹೇಳಿದರು .

ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬಿಜೆಪಿ ಸರ್ಕಾರ ರಚನೆಗೆ 111 ಸೀಟುಗಳು ಬೇಕು. ತಾಂತ್ರಿಕವಾಗಿ ಅವರಿಗೆ ಸಂಖ್ಯಾಬಲ ಇಲ್ಲ, ಸಂಖ್ಯಾಬಲ ಇಲ್ಲದಕ್ಕೆ ಇಷ್ಟೆಲ್ಲ ಡ್ರಾಮಾ ನಡೆದಿದೆ. ಯಾವ ಆದಾರದ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಕಾದು ನೋಡಬೇಕಿದೆ ಎಂದರು.

ಇನ್ನು ಅತೃಪ್ತ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟಿದ್ದು, ಸ್ಪೀಕರ್ ರಮೇಶ್ ಕುಮಾರ್ ನಿಪ್ಷಕ್ಷಪಾತವಾಗಿ ಕೆಲಸ ಮಾಡಿದ್ದಾರೆ.

Related posts: