RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು

ಗೋಕಾಕ:ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು 

ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ.26 :

 

 

ದಿ. 28 ಮತ್ತು 29 ರಂದು ನಗರದಲ್ಲಿ ನಡೆಯಲಿರುವ ಬೆಳಗಾವಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಬುಧವಾರದಂದು ಜಾಗೃತಿಗಾಗಿ ಜಾಥಾ ಜರುಗಿತು.
ಜಾಗೃತಾ ಜಾಥಾದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು. ಜಾಥಾ ನಗರದ ಕೊಳವಿ ಹಣಮಂತ ದೇವರ ದೇವಸ್ಥಾನದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಗೋಳ್ಳಿ ರಾಯಣ್ಣ ವೃತ್ತ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮುಕ್ತಾಯಗೊಂಡಿತು.
ಸ್ವಾಗತ ಸಮಿತಿ ಕಾರ್ಯದರ್ಶಿ ಮಹಾಂತೇಶ ತಾವಂಶಿ, ಅಶೋಕ ಪೂಜಾರಿ, ಎಸ್.ಎ.ಕೊತವಾಲ, ಗಂಗಾಧರ ಮಳಗಿ , ಬಸವರಾಜ ಖಾನಪ್ಪನವರ , ಶ್ರೀಮತಿ ರಜನಿ ಜೀರಗ್ಯಾಳ,ಸಂತೋಷ ಖಂಡ್ರಿ, ನಗರಸಭೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಾಥಾದಂತೆ ಕಂಡು ಬರದೆ ಸರಕಾರಿ ಯೋಜನೆಯ ಪ್ರಚಾರಾರ್ಥ ವಿದ್ಯಾರ್ಥಿಗಳ ಜಾಥಾದಂತೆ ಕಂಡು ಬಂದಿತು. ಇನ್ನೂ ಒಂದು ವಿಶೇಷವೆಂದರೆ, ಕಸಾಪ ಸದಸ್ಯರು ಬೆರಳಣಿಕೆಯಷ್ಟು ಮಾತ್ರ ಇದ್ದದ್ದು ಕಂಡು ಬಂದಿತು.

Related posts: