ಗೋಕಾಕ:ಶಿರಗಾಂವಕರ ಬುಕ್ ಸ್ಟಾಲ್ ಅವರಿಂದ ಉಚಿತವಾಗಿ ಸ್ಕೂಲ್‍ಬ್ಯಾಗ್ ಹಾಗೂ ನೋಟ್‍ಬುಕ್ಕ ವಿತರಣೆ
ಶಿರಗಾಂವಕರ ಬುಕ್ ಸ್ಟಾಲ್ ಅವರಿಂದ ಉಚಿತವಾಗಿ ಸ್ಕೂಲ್‍ಬ್ಯಾಗ್ ಹಾಗೂ ನೋಟ್‍ಬುಕ್ಕ ವಿತರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 6 :
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಕಾರ್ಯದಲ್ಲಿ ನೆರವನ್ನು ನೀಡುತ್ತಿರುವ ಶಿರಗಾಂವಕರ ಅವರ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ನಗರದ ಕುರಬರ ದಡ್ಡಿಯ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಿರಗಾಂವಕರ ಬುಕ್ ಸ್ಟಾಲ್ ಅವರಿಂದ ಉಚಿತವಾಗಿ ಸ್ಕೂಲ್‍ಬ್ಯಾಗ್ ಹಾಗೂ ನೋಟ್‍ಬುಕ್ಕಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಶಿಕ್ಷಣ ಇಲಾಖೆಯೊಂದಿಗೆ ಶಿಕ್ಷಣ ಪ್ರೇಮಿಗಳು ಕೂಡಾ ತಮ್ಮ ಕೈಲಾದ ಸಹಾಯ, ಸಹಕಾರವನ್ನು ನೀಡಬೇಕು ಅಂದಾಗ ಮಾತ್ರ ನಾವು ಶೈಕ್ಷಣಿಕ ರಂಗದಲ್ಲಿ ಪ್ರಗತಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು ತಿಪ್ಪಣ್ಣ ಶಿರಗಾಂವಕರ ಅವರು ಪ್ರತಿವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಾಗ್ರಿಗಳು ವಿತರಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಇತರÀರಿಗೂ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ನಗರಸಭೆ ಸದಸ್ಯ ಸಿದ್ದಪ್ಪ ಹುಚ್ಚರಾಮಗೋಳ ಹಾಗೂ ಎಸ್‍ಡಿಎಮ್‍ಸಿ ಅಧ್ಯಕ್ಷ ರಾಯಪ್ಪ ಗೋಟೆನ್ನವರ ಅವರು ವಿದ್ಯಾರ್ಥಿಗಳಿಗೆ ಸ್ಕೂಲ್‍ಬ್ಯಾಗ್ ಹಾಗೂ ನೋಟ್‍ಬುಕ್ಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ಶಿರಗಾಂವಕರ, ತೇಜಸ್ವೀನಿ ಶಿರಗಾಂವಕರ, ಉಜ್ವಲಾ ಶಿರಗಾಂವಕರ, ದುಂಡಪ್ಪ ಕೌಜಲಗಿ, ಭೀಮಶಿ ಮದಿಹಳ್ಳಿ, ಮುದಕಪ್ಪ ಉಳ್ಳಾಗಡ್ಡಿ, ಪ್ರಧಾನ ಗುರುಗಳಾದ ವಾಯ್.ಎಚ್.ಕುರಬಗಟ್ಟಿ ಹಾಗೂ ಶಿಕ್ಷಕರು, ಸಿಬ್ಬಂದಿಯವರು ಇದ್ದರು.