RNI NO. KARKAN/2006/27779|Thursday, October 16, 2025
You are here: Home » breaking news » ಖಾನಾಪುರ:ಶ್ರೀಗಂಧದ ಕಟ್ಟಗೆ ಕಡಿಯುತ್ತಿದ ಐವರ ಬಂಧನ : ಪ್ರಕರಣ ದಾಖಲು

ಖಾನಾಪುರ:ಶ್ರೀಗಂಧದ ಕಟ್ಟಗೆ ಕಡಿಯುತ್ತಿದ ಐವರ ಬಂಧನ : ಪ್ರಕರಣ ದಾಖಲು 

ಶ್ರೀಗಂಧದ ಕಟ್ಟಗೆ ಕಡಿಯುತ್ತಿದ ಐವರ ಬಂಧನ : ಪ್ರಕರಣ ದಾಖಲು

 

ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಮೇ 26 :

 

ಶ್ರೀಗಂಧದ ಕಟ್ಟಿಗೆ ಕಡಿಯುತ್ತಿದ ಐವರನ್ನು ಬಂಧಿಸಿರುವ ಘಟನೆ ಖಾನಾಪುರ ತಾಲೂಕಿನ ಗೋಲಿಹಳ್ಳಿ ವಲಯದ ಗುಂಡೋಳ್ಳಿ ಹಾಗೂ ಜಂಗಮನಹಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದಿದೆ

ರವಿವಾರಂದು ಗೋದೋಳ್ಳಿ ಶಾಖೆಯ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಟ್ಟಿಗೆ ಕಡಿಯುತ್ತಿದ ಏಳ ಜನ ಆರೋಪಿಗಳಲ್ಲಿ ಐದು ಜನರನ್ನು ಬಂಧಿಸಿದ್ದಾರೆ ಎರೆಡು ಜನ ಆರೋಪಿಗಳು ಫರಾರಿಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ
ಬಂಧಿತರಿಂದ 25.500 ಕೆಜಿ ಶ್ರೀಗಂಧ ಮತ್ತು ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಪ್ರಕರಣ ದಾಖಲಾಗಿದೆ

ನಾಗರಗಾಳಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಎಂ.ಕೆ ಪಾತ್ರೋಟ ಮತ್ತು ವಲಯ ಅರಣ್ಯ ಅಧಿಕಾರಿ ರತ್ನಾಕರ ಓಬಣ್ಣವರ ಮಾರ್ಗದರ್ಶನದಲ್ಲಿ
ಅರಣ್ಯ ಅಧಿಕಾರಿಗಳಾದ ಪ್ರಕಾಶ ಮರೆಪ್ಪನವರ , ಎಚ್.ಲೋಹಿತ ,ಸಂತೋಷ ಹೀರೆಮಠ , ಅರಣ್ಯ ರಕ್ಷಕರಾದ ಮಂಜುನಾಥ ಗೌಡ್ರ ,ಬಿ.ಎ.ಮಾಡಿಕ , ಪಿ.ಎಮ್. ಬಾವಲೇಕರ , ಆರ್.ಎನ್. ಹುಬ್ಬಳ್ಳಿ , ಬಿ.ವಿ.ಕರಲಿಂಗನವರ , ಅಜಯ ಭಾಸ್ಕರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

Related posts: