RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಉಚಿತ ಆರೋಗ್ಯ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರ

ಗೋಕಾಕ:ಉಚಿತ ಆರೋಗ್ಯ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರ 

ಉಚಿತ ಆರೋಗ್ಯ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರ

ಗೋಕಾಕ ಅ 5 : ಇಲ್ಲಿಯ ರಹಬರ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗೋಕಾಕ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಉಚಿತ ಆರೋಗ್ಯ ಮತ್ತು ಕಣ್ಣಿನ ಪೊರೆ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು .

ಶುಕ್ರವಾರದಂದು ಸಂಗಮ ನಗರದ ಅರಫಾತ ಮಸಜಿದ್ದ ಆವರಣದಲ್ಲಿ ನಡೆದ ಶಿಬಿರಕ್ಕೆ ಅಂಜುಮನ್ ಇಸ್ಲಾಂ ಕಮೀಟಿಯ ಅಧ್ಯಕ್ಷ ಜಾವೇದ ಗೋಕಾಕ ಚಾಲನೆ ನೀಡಿ ಮಾತನಾಡಿ ಒಬ್ಬ ಆರೋಗ್ಯವಂತ ಮನುಷ್ಯ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ . ಯುವಕರು ದುಶ್ಚಟಗಳಿಗೆ ಮೊರೆ ಹೋಗದೆ ಇಂತಸ ಸಮಾಜಿಕ ಕಾಳಜಿವುಳ ಕಾರ್ಯಗಳಿಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು .

ಶಿಬಿರದಲ್ಲಿ ಡಾ. ಕೋಣಿ , ಡಾ. ಚಾಂದನಿ ದೇವಡಿ , ಡಾ.ಸ್ವೇತಾ ದೋಡಮನಿ, ಡಾ. ರಾಜಶ್ರೀ ಸಬರದ , ಡಾ. ರೇಖಾ ಹೊಸಮಠ ಭಾಗವಹಿಸಿದ್ದರು . ಶಿಬಿರದಲ್ಲಿ ಸುಮಾರು 80 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಈ ಶಿಬಿರದ ಲಾಭ ಪಡೆದುಕೊಂಡರು

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಜಾಫರ್ ಪೀರಜಾದೆ , ಇಮ್ರಾನ್ ಗೊಟೇದ , ಸೇರಿದಂತೆ ಸಂಸ್ಥೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು

Related posts: