RNI NO. KARKAN/2006/27779|Thursday, March 19, 2026
You are here: Home » breaking news » ಚಿಕ್ಕೋಡಿ:ಸಚಿವರ ಸಭೆಯಲ್ಲಿ ಜಾಗದ ಕೊರತೆ : ನಿಂತುಕೊಂಡೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು

ಚಿಕ್ಕೋಡಿ:ಸಚಿವರ ಸಭೆಯಲ್ಲಿ ಜಾಗದ ಕೊರತೆ : ನಿಂತುಕೊಂಡೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು 

ಸಚಿವರ ಸಭೆಯಲ್ಲಿ ಜಾಗದ ಕೊರತೆ : ನಿಂತುಕೊಂಡೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು

ಚಿಕ್ಕೋಡಿ ಜು 21 : ಸಚಿವ ಜಾರಕಿಹೊಳಿ ಅವರ ಸಭೆಯಲ್ಲಿ ಅಧಿಕಾರಿಗಳು ಸ್ಥಳಾವಕಾಶ ವಿಲ್ಲದೆ ನಿಂತುಕೊಂಡೆ ಭಾಗವಹಿಸಿದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೃಷ್ಣಾ ಹಾಗೂ ಉಪನದಿಗಳ ಪ್ರವಾಹ ಪರಿಸ್ಥಿತಿ ಕುರಿತ ಜಿಲ್ಲಾ ಮಟ್ಟದ ಸಭೆ ಆಯೋಜನೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಹಾಗೂ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಆದರೆ ಕುಳಿತುಕೊಳ್ಳಲು ಕೂಡ ಸ್ಥಳ ಇಲ್ಲದೆ  ಸಾಕಷ್ಟು ಜಿಲ್ಲಾ ಮಟ್ಟದ ಅಧಿಕಾರಿಗಳು  ನಿಂತುಕೊಂಡೇ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಭಾಂಗಣದಲ್ಲಿ ನಿಲ್ಲಲೂ ಆಗದೆ ಸಾಕಷ್ಟು ಅಧಿಕಾರಿಗಳು ಸಭಾಂಗಣದ ಹೊರಗಡೆಯೇ ನಿಂತಿದ್ದಾರೆ. 

ಕಾಟಾಚಾರಕ್ಕೆ ನಡೆಯುತ್ತಿರುವ ಪ್ರವಾಹ ಕುರಿತ ಜಿಲ್ಲಾ ಮಟ್ಟದ ಸಭೆಯಲ್ಲಿ  ಶಾಸಕರಾದ ಗಣೇಶ ಹುಕ್ಕೇರಿ, ಮಹೇಶ ಕುಂಗಟೋಳ್ಳಿ, ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಜಿಲ್ಲಾಧಿಕಾರಿ ಎಸ್ ಜೀಯಾವುಲ್ಲಾ, ಎಸ್ಪಿ ಸುಧೀರಕುಮಾರ ರೆಡ್ಡಿ, ಜಿ.ಪಂ ಸಿಇಒ ರಾಮಚಂದ್ರನ್, ಡಾ.ಸಿ.ರಾಜಪ್ಪ, ಉಪವಿಭಾಗಾಧಿಕಾರಿ ಗೀತಾ ಕೌಲಗಿ, ಸೇರಿ ಹಲವು ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ. ತಹಸೀಲ್ದಾರ, ಉಪ ವಿಭಾಗಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ನಿಂತುಕೊಂಡೇ ಭಾಗವಹಿಸಿದ್ದಾರೆ. 

Related posts: