RNI NO. KARKAN/2006/27779|Tuesday, December 30, 2025
You are here: Home » breaking news » ಬೆಳಗಾವಿ:ಕರ್ನಾಟಕದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ ಹೊಡೆಯುತ್ತೇವೆ : ಭೀಮಾಶಂಕರ

ಬೆಳಗಾವಿ:ಕರ್ನಾಟಕದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ ಹೊಡೆಯುತ್ತೇವೆ : ಭೀಮಾಶಂಕರ 

ಕರ್ನಾಟಕದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ  ಹೊಡೆಯುತ್ತೇವೆ : ಭೀಮಾಶಂಕರ

ಬೆಳಗಾವಿ ನ 27 : ರಾಜಕೀಯ ನಿರಾಶ್ರಿತರು ರಾಜ್ಯದಲ್ಲಿ ಶಿವಸೇನೆ ಕಟ್ಟಲು ಮುಂದಾದರೆ ಕಲ್ಲಲ್ಲಿ ಹೊಡೆಯುತ್ತೇವೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ರಾಜಕೀಯ ತೆವಲಿಗಾಗಿ ನಾಡವಿರೋಧಿ ಶಿವಸೇನೆ ಪಕ್ಷವನ್ನು ರಾಜ್ಯದಲ್ಲಿ ಕಟ್ಟಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಕಿಡಿಕಾರಿದರು.

ಶಿವಸೇನೆ ಪಕ್ಷ ಕಟ್ಟಲು ಹೊರಟವರ ಮೈಯಲ್ಲಿ ಕನ್ನಡದ ರಕ್ತ ಹರಿಯುತ್ತಿದೆಯೇ, ಶಿವಸೇನೆ ಅಸ್ತಿತ್ವಕ್ಕೆ ಅವಕಾಶವಿಲ್ಲ ನೀಡುವುದಿಲ್ಲ. ಜತೆಗೆ ಶಿವಸೇನೆ ಕಟ್ಟುವವರಿಗೆ ಕಲ್ಲು ತೆಗೆದುಕೊಂಡು ಹೊಡೆಯುತ್ತೇವೆ, ಪಕ್ಷ ಕಟ್ಟುವುದನ್ನು ಸೇನೆ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯ ಒಂದಿಂಚು ಮಣ್ಣು ಮುಟ್ಟಲು ಶಿವಸೇನೆಗೆ ನೀಡುವುದಿಲ್ಲ. ಉದ್ಧವ್‌ ಠಾಕ್ರೆ ರಾಜಕೀಯ ತೆವಲಿಗಾಗಿ ಗಡಿ ವಿಚಾರ ಕೆದಕದಂತೆ ಎಚ್ಚರಿಕೆ ನೀಡಿದರು.

ಇತ್ತೀಚೆಗಷ್ಟೆ ಮಾಜಿ ಮೇಯರ್‌ ಶಿವಾಜಿ ಸುಂಟಕರ್‌ ಬಿಜೆಪಿ ಪಕ್ಷಕ್ಕೆ ಸೇರಿದ್ದು, ಅವರನ್ನು ಕೂಡಲೇ ಬಿಎಸ್‌ವೈ ತಮ್ಮ ಪಕ್ಷದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

Related posts: